ರಡ್ಡೇರಹಟ್ಟಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಬಿ.ಬಿ.ಬಿಸಲಾಪುರ, ಅದೃಶಪ್ಪ ಬೆಳ್ಳಂಕಿ, ಮುರಗೆಪ್ಪ ಬಾವಿ, ಜ್ಞಾನೇಶ್ವರ ಖೋತ ಇತರರಿದ್ದರು. 
ಬೆಳಗಾವಿ

ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ

ರಾಘವೇಂದ್ರಗೌಡ ಭೀ ಪಾಟೀಲ್
ಅಥಣಿ ಗ್ರಾಮೀಣ: ಅಥಣಿ ಕ್ಷೇತ್ರದ ಜನರಿಗೆ ನೀರಾವರಿ, ಶಿಕ್ಷಣ, ರಸ್ತೆ ಸುಧಾರಣೆ ಸೇರಿ ಮೂಲಸೌಕರ್ಯ ಒದಗಿಸುವುದು ನನ್ನ ಗುರಿಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ 17.70 ಲಕ್ಷ ರೂ. ವೆಚ್ಚದ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಗ್ರಂಥಾಲಯ ಜೀವಂತ ದೇವಾಲಯವಿದ್ದಂತೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಇವು ಅನುಕೂಲವಾಗಿವೆ. ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರಸಹಕಾರ ಅಗತ್ಯ ಎಂದು ತಿಳಿಸಿದರು.
ವಕೀಲ ಬಿ.ಬಿ.ಬಿಸಲಾಪುರ ಮಾತನಾಡಿ, ರಡ್ಡೇರಹಟ್ಟಿಯಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣ ಆಗುತ್ತಿರುವುದು ಸಂತಸ ಮೂಡಿಸಿದೆ. ವಿದ್ಯಾರ್ಥಿಗಳು ಗ್ರಂಥಾಲಯದಿಮದ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದರು.
ಮುಖಂಡರಾದ ಅದೃಶಪ್ಪ ಬೆಳ್ಳಂಕಿ, ಮುರಗೆಪ್ಪ ಬಾವಿ, ಜ್ಞಾನೇಶ್ವರ ಖೋತ, ಹನುಮಂತ ಬೆಳ್ಳಂಕಿ, ಬಸಪ್ಪ ಖೋತ, ಮಹಾದೇವ ಗಲಗಲಿ, ಮಂಜುನಾಥ ಹುಸದಾರ, ಮಲ್ಲಪ್ಪ ಸಾರವಾಡ, ಗ್ರಾಪಂ ಅಧ್ಯಕ್ಷೆ ಸುವರ್ಣಾ ಮಡಿವಾಳ, ಉಪಾಧ್ಯಕ್ಷೆ ದೇವಕಿ ಮಾದರ, ಪಾಂಡು ಭೋಸಲೆ, ಶ್ರೀಶೈಲ ಹಾವರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಬಸಪ್ಪ ಹುಲ್ಯಾಳ, ಮುಖ್ಯಶಿಕ್ಷಕ ಎಂ.ಆರ್.ಈಶ್ವರಪ್ಪ, ಜಿಪಂ ಎಇಇ ವೀರಣ್ಣ ವಾಲಿ ಇತರರಿದ್ದರು.