ಸವದತ್ತಿಯಲ್ಲಿ ರೈತರಿಗೆ ಸಸಿ ವಿತರಿಸುವ ಮೂಲಕ ಗಂಗಾಧರ ದೀಕ್ಷಿತರು ತ್ಯಾಗವೀರ ಲಿಂಗರಾಜ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಸಂಘ ಉದ್ಘಾಟಿಸಿದರು. ಶಿವಪ್ರಸಾದ ಪಾಟೀಲ, ರಮೇಶ ಹಾವರಡ್ಡಿ, ಭರಮಪ್ಪ ಅಣ್ಣಿಗೇರಿ ಇತರರಿದ್ದರು. 
ಬೆಳಗಾವಿ

ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸಿ

ವಿದ್ಯಾ ಶೆಟ್ಟನಗೌಡ್ರ
ಸವದತ್ತಿ: ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿ ನೆಟ್ಟು ಪೋಷಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಶಿವಪ್ರಸಾದ ಪಾಟೀಲ ಹೇಳಿದರು.
ನಗರದ ಪಟ್ಟದಕಲ್ಲು ಓಣಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತ್ಯಾಗವೀರ ಲಿಂಗರಾಜ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಸಂಘ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಹೆಸರಲ್ಲಿ ಸ್ಥಾಪನೆಯಾಗಿರುವ ಸಂಘ ಶಿಕ್ಷಣ, ಸಾಮಾಜಿಕ ಹಾಗೂ ಪರಿಸರ ಜಾಗೃತಿಗೆ ಶ್ರಮಿಸಲಿ ಎಂದು ತಿಳಿಸಿದರು.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ರಮೇಶ ಹಾವರಡ್ಡಿ ಮಾತನಾಡಿ, ಪರಿಸರ ಸಮತೋಲನ ಕಾಪಾಡಲು ವೃಕ್ಷಾರೋಪಣೆ ಅತ್ಯಗತ್ಯ ಎಂದರು.
ಗಂಗಾಧರ ದೀಕ್ಷಿತರು ಆಶೀರ್ವಚನ ನೀಡಿದರು. ಡಾ.ಅನಿಲ ಮರಲಿಂಗಣ್ಣವರ, ನಗರಸಭೆಯ ಕಿರಿಯ ಅಭಿಯಂತ ಶಂಕರ ದಂಡಿನ ಹಾಗೂ ಸಾಮಾಜಿಕ ಅರಣ್ಯ ವಲಯದ ಐ.ಎಸ್.ಇಟ್ನಾಳ ಮಾತನಾಡಿದರು. ರೈತರು, ಸಾರ್ವಜನಿಕರಿಗೆ ವಿವಿಧ ಜಾತಿಯ ಸಸಿ ಉಚಿತವಾಗಿ ವಿತರಿಸಲಾಯಿತು.
ಭರಮಪ್ಪ ಅಣ್ಣಿಗೇರಿ, ಯಲ್ಲಪ್ಪ ಮಡ್ಲಿ, ಮಹೇಶ ರಾವಳ, ಶಶಿಧರ ಸೋಮಣ್ಣವರ, ನಾರಾಯಣ ಮುತಗೊಂಡ, ಜಯಪ್ಪ ಹವಾಲ್ದಾರ್, ರಮೇಶ ಬೆಟಿಗೇರಿ, ಪ್ರದೀಪ ಮುತ್ತಗೊಂಡ, ಬಸವರಾಜ ಮಡ್ಲಿ, ಹುಸೇನಸಾಬ್ ನದಾಫ್ ಇತರರಿದ್ದರು.