ಬೈಲಹೊಂಗಲ ಪಟ್ಟಣದಲ್ಲಿ ಪಶು ಪಾಲಿಕ್ಲಿನಿಕ್ ನಿರ್ಮಾಣ
ಬೆಳಗಾವಿ :ಪ್ರಪ್ರಥಮ ಬಾರಿಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಸಾಕು ನಾಯಿ, ಬೆಕ್ಕುಗಳಿಗೆ ಒಂದೇ ಸೂರಿನಡಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಒದಗಿಸುವ ‘ಪಶು ಪಾಲಿಕ್ಲಿನಿಕ್’ ತಲೆ ಎತ್ತಲಿದೆ!
ಹೌದು.ರಾಜ್ಯ ಸರ್ಕಾರವು ಲಕ್ಷಾಂತರ ಸಾಕು ಪ್ರಾಣಿಗಳಿಗೂ ಶಸ್ತ್ರಚಿಕಿತ್ಸೆ, ಅಲ್ಟ್ರಾ ಸೌಂಡ್ ಸ್ಕಾೃನಿಂಗ್ ಸೇರಿ ವಿವಿಧ ತುರ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪಶು ಸಂಜೀವಿನಿ ಯೋಜನೆಯಡಿ ಬೈಲಹೊಂಗಲ, ಹಿರೇಬಾಗೇವಾಡಿ ಹಾಗೂ ಚಿಕ್ಕೋಡಿಗೆ ಮೂರು ಪಶು ಪಾಲಿಕ್ಲಿನಿಕ್ ಮಂಜೂರು ಮಾಡಿದೆ. ಇದರಲ್ಲಿ ಬೈಲಹೊಂಗಲ ಪಟ್ಟಣದಲ್ಲಿ ಪಶು ಪಾಲಿಕ್ಲಿನಿಕ್ ನಿರ್ಮಾಣ ಪ್ರಗತಿ ಹಂತದಲ್ಲಿದೆ. ಕ್ಲಿನಿಕ್‌ಗಳಿಗಾಗಿ ಸರ್ಕಾರವು ಕೋಟ್ಯಂತರ ರೂ. ಅನುದಾನ ಜತೆಗೆ ತಜ್ಞ ವೈದ್ಯರು, ನುರಿತ ವೈದ್ಯಕೀಯ ಸಿಬ್ಬಂದಿ ನಿಯೋಜನೆಗೆ ಕ್ರಮ ವಹಿಸಿದೆ.
ಬೆಳಗಾವಿ ಮಹಾನಗರ ಸೇರಿ ಜಿಲ್ಲೆಯ್ಯದ್ಯಂತ ನಾಯಿ, ಬೆಕ್ಕು ಸೇರಿ 1.80ಲಕ್ಷಕ್ಕೂ ಅಧಿಕ ಸಾಕು ಪ್ರಾಣಿಗಳಿವೆ. ಆದರೆ, ಇವುಗಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಕೊಡಿಸಲು ಪ್ರಾಣಿ ಪ್ರಿಯರು ಬೆಳಗಾವಿ ನಗರದಲ್ಲಿರುವ ಪಶು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಇಲ್ಲವೇ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ.ಕೆಲವರು ಸ್ಥಳೀಯದಲ್ಲಿ ಮಟ್ಟದಲ್ಲಿಯೇ ನಾಟಿ ಔಷಧಿಯ ಮೊರೆ ಹೋಗುತ್ತಿದ್ದಾರೆ. ಕೆಲವೊಮ್ಮೆ ತುರ್ತು ಚಿಕಿತ್ಸೆ ಸಿಗದೆ ಲಕ್ಷಾಂತರ ರೂ. ಮೌಲ್ಯದ ಸಾಕು ನಾಯಿ, ಬೆಕ್ಕು ಮೃತಪಟ್ಟಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಮೊದಲ ಹಂತದಲ್ಲಿ ಜಿಲ್ಲೆಗೆ ಮೂರು ಪಶುಪಾಲಿಕ್ಲಿನಿಕ್ ಆರಂಭಿಸಲಾಗುತ್ತಿದೆ.
ಈಗಾಗಲೇ ಬೆಳಗಾವಿ ಮಹಾನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ಖಾಸಗಿ ಕ್ಲಿನಿಕ್‌ಗಳಲ್ಲಿ ನಿತ್ಯ ಕನಿಷ್ಠ 200 ರಿಂದ 350 ವರೆಗೆ ಸಾಕು ಪ್ರಾಣಿಗಳಿಗೆ ವೈದ್ಯಕೀಯ ಚಿಕಿತ್ಸಾ ತಪಾಸಣೆ ಪ್ರಕ್ರಿಯೇ ನಡೆಯುತ್ತಿದೆ. ದೂರದ ಊರುಗಳಿಂದ ಬೆಳಗಾವಿಗೆ ಸಾವಿರಾರೂ ಖರ್ಚು ಮಾಡಿಕೊಂಡು ಬರುತ್ತಿದ್ದಾರೆ. ಇದನ್ನು ತಡೆಗಟ್ಟಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿಯೇ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಒಳಗೊಂಡಿರುವ ಪಾಲಿಕ್ಲಿನಿಕ್‌ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಒಂದು ತಿಂಗಳಿನಲ್ಲಿ ಬೈಲಹೊಂಗಲ ಪಾಲಿಕ್ಲಿನಿಕ್ ಕಾರ್ಯರಂಭಿಸಲಿದೆ. ಚಿಕ್ಕೋಡಿ, ಹಿರೇಗೇವಾಡಿಯಲ್ಲಿ ಕ್ಲಿನಿಕ್‌ಗಳಿಗೆಭೂಮಿ ಪೂಜೆ ಆಗಲಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕ್ಲಿನಿಕ್‌ದಲ್ಲಿ ಏನೇನೂ ಸೌಲಭ್ಯ ಲಭ್ಯ!
* ಸಣ್ಣ, ದೊಡ್ಡ ಪ್ರಾಣಿಗಳಿಗೆ ಪ್ರತ್ಯೇಕವಾಗಿ ಒಳರೋಗಿಗಳ ಕೊಠಡಿ
* ಅಲ್ಟ್ರಾಸೌಂಡ್, ಶಸ್ತ್ರಚಿಕಿತ್ಸಾ, ಸ್ಕಾೃನಿಂಗ್ ಕೊಠಡಿ
* ರಕ್ತ ಪರೀಕ್ಷಾ ತಪಾಸಣಾ ಕೇಂದ್ರ
* ಮೂಳೆ ಮುರಿತ ಶಸ್ತ್ರಚಿಕಿತ್ಸೆ ವಿಭಾಗ
* ಇನ್‌ಹೆಲೇಷನ್ ಅನಸ್ತೇಸಿಯಾ (ಉಸಿರಾಟ)
* ಪ್ರಾಣಿಗಳಿಗೆ ಸ್ತನಕ್ಯಾನ್ಸರ್, ಕ್ಯಾನ್ಸರ್ ಗಡ್ಡೆಗಳ ಶಸ್ತ್ರಚಿಕಿತ್ಸೆ
........................................
ಜಿಲ್ಲೆಯ ದೊಡ್ಡ, ಸಣ್ಣ ಪ್ರಾಣಿಗಳ ವಿವರ
...........................................
ಸಾಕು ಪ್ರಾಣಿಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಬೈಲಹೊಂಗಲ, ಹಿರೇಬಾಗೇವಾಡಿ, ಚಿಕ್ಕೋಡಿಗೆ ಪಶು ಪಾಲಿಕ್ಲಿನಿಕ್ ಮಂಜೂರು ಮಾಡಿದೆ. ಅದರಲ್ಲಿ ಬೈಲಹೊಂಗಲ ಆಸ್ಪತ್ರೆ ಉದ್ಘಾಟನೆಗೆ ಸಜ್ಜಾಗಿದೆ. ಇನ್ನೂ ಹೊಸದಾಗಿ ಮೂರು ಪಾಲಿಕ್ಲಿನಿಕ್‌ಗಳನ್ನು ಮಂಜೂರಾಗಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಡಾ.ರವಿ ಸಾಲಿಗೌಡ, ಜಂಟಿ ನಿರ್ದೇಶ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ