ಮತ್ತಿಕೊಪ್ಪದ ಕೆವಿಕೆ ಆವರಣದಲ್ಲಿ ಶುಕ್ರವಾರ ಜ್ಯೂಸ್ ಬಿಲ್ವ ಸಸಿ ನೆಡುವ ಮೂಲಕ ಡಾ.ಪ್ರಭಾಕರ ಕೋರೆ ಜನ್ಮದಿನ ಆಚರಿಸಲಾಯಿತು. ಬಿ.ಆರ್.ಪಾಟೀಲ, ಡಾ.ಮಂಜುನಾಥ ಚೌರಡ್ಡಿ, ಪ್ರವೀಣ ಯಡಹಳ್ಳಿ, ಡಾ.ಎಸ್.ಎಸ್.ಹಿರೇಮಠ ಇತರರಿದ್ದರು. 
ಬೆಳಗಾವಿ

ಪರಿಸರಕ್ಕೆ ಪೂರಕವಾದ ಆಚರಣೆಗಳು ಸೂಕ್ತ

ಡಿ.ವಿ. ಕಮ್ಮಾರ
ಬೆಳಗಾವಿ : ಜನ್ಮದಿನವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಪರಿಸರಕ್ಕೆ ಉಪಯುಕ್ತವಾಗುವ ಕಾರ್ಯ ಕೈಗೊಳ್ಳುವುದು ಅತ್ಯಂತ ಅರ್ಥಪೂರ್ಣ. ಪ್ರತಿಯೊಬ್ಬರೂ ತಮ್ಮ ವಿಶೇಷ ದಿನಗಳಲ್ಲಿ ಕನಿಷ್ಠ ಒಂದಾದರೂ ಸಸಿ ನೆಟ್ಟು ಪೋಷಿಸುವ ಜವಾಬ್ದಾರಿ ವಹಿಸಿಕೊಂಡಲ್ಲಿ ಆರೋಗ್ಯಕರ ಸಮಾಜ ಹಾಗೂ ಹಸಿರು ಪರಿಸರ ನಿರ್ಮಾಣ ಸಾಧ್ಯಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಹಾಗೂ ಐಸಿಎಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಬಿ.ಆರ್.ಪಾಟೀಲ ಹೇಳಿದರು.
ಮತ್ತಿಕೊಪ್ಪದ ಐಸಿಎಆರ್‌ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಪದ್ಮಶ್ರೀ ಡಾ.ಪ್ರಭಾಕರ ಕೋರೆಯವರ 79ನೇ ಜನ್ಮದಿನ ಪ್ರಯುಕ್ತ ಏರ್ಪಡಿಸಿದ್ದ ಔಷಧೀಯ ಹಾಗೂ ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಜ್ಯೂಸ್ ಬಿಲ್ವ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಮಾತನಾಡಿ, ಔಷಧಿಯ ಗುಣಗಳು ಮತ್ತು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಜ್ಯೂಸ್ ಬಿಲ್ವದಂತಹ ಸಸ್ಯಗಳನ್ನು ಬೆಳೆಸುವುದು ಪರಿಸರ ಸಂರಕ್ಷಣೆಯ ಜೊತೆಗೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಇಂತಹ ಕಾರ್ಯಕ್ರಮಗಳು ಪರಿಸರ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ತೋಟಗಾರಿಕೆ ವಿಜ್ಞಾನಿ ಪ್ರವೀಣ ಯಡಹಳ್ಳಿ ಮಾತನಾಡಿ, ಜ್ಯೂಸ್ ಬಿಲ್ವದ ವೈಜ್ಞಾನಿಕ ಮಹತ್ವ, ಔಷಧೀಯ ಉಪಯೋಗಗಳು ಹಾಗೂ ಸುಸ್ಥಿರ ಕೃಷಿಯಲ್ಲಿ ಅದರ ಸಾಧ್ಯತೆಗಳ ಕುರಿತು ಮಾಹಿತಿ ನೀಡಿದರು.
ವಿಜ್ಞಾನಿಗಳಾದ ಡಾ.ಎಸ್.ಎಸ್.ಹಿರೇಮಠ, ಎಸ್.ಎಂ.ವಾರದ, ಜಿ.ಬಿ.ವಿಶ್ವನಾಥ, ಡಾ.ಭಾವಿನಿ ಪಾಟೀಲ, ಡಾ.ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ ಹಾಗೂ ವಿನೋದ ಕೋಚಿ ಸೇರಿ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ, 100ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.