ಬೈಲಹೊಂಗಲ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪರಿಸರ ಸಂರಕ್ಷಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಚಾಲನೆ ನೀಡಿದರು. ಸಂದೀಪ ದೇಶಪಾಂಡೆ, ರಾಜು ಕೂಡಸೋಮಣ್ಣವರ, ಸುಭಾಸ ತುರಮರಿ ಇತರರಿದ್ದರು.
ಬೈಲಹೊಂಗಲ: ಮನುಷ್ಯ ಸೇರಿ ಎಲ್ಲ ಪ್ರಾಣಿಗಳು ಆರೋಗ್ಯಯುತವಾಗಿ ಬದುಕಲು ಪರಿಸರ ರಕ್ಷಣೆ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಳ ಹಾಗೂ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ನಗರದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಜು ಕೂಡಸೋಮಣ್ಣವರ, ಮಂಡಳ ಅಧ್ಯಕ್ಷ ಸುಭಾಸ ತುರಮರಿ, ಮಹಾಂತೇಶ ಚಿನ್ನಪ್ಪಗೌಡ್ರ, ಅರುಣ ಬೋಳೆತ್ತಿನ, ವಿಶಾಲ ಬೊಗೂರ, ಶಿವಪ್ರಸಾದ ಪಾಟೀಲ, ವಿಜಯ ಹೊಸಮನಿ, ವಿಜಯ ಗೌಡರ, ಈರಣ್ಣ ತಟ್ಟಿಮನಿ, ಶ್ರೀಶೈಲ ಹಂಪಿಹೊಳಿ, ಕಾರ್ತಿಕ ಪಾಟೀಲ, ನಿಕಟಪೂರ್ವ ಮಂಡಳ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಮುಖಂಡರಾದ ಆನಂದ ಮೂಗಿ, ಅಶೋಕ ಗುಂಡ್ಲ್ಲೂರ, ಜಗದೀಶ ಜಂಬಗಿ, ಮಹಾಂತೇಶ ಗುಂಡ್ಲ್ಲೂರ, ರಿತೇಶ ಪಾಟೀಲ, ನಾಗಪ್ಪ ಗುಂಡ್ಲೂರ, ಗಂಗಪ್ಪ ಗುಗ್ಗರಿ, ಬಸವರಾಜ ನೇಸರಗಿ, ಸುನಿಲ ಈಟಿ, ಚಂದ್ರು ಭರಮನ್ನವರ ಇತರರಿದ್ದರು.