ಸವದತ್ತಿಯ ಕೆ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ಶಿವಾನಂದ ಹಾಲೊಳ್ಳಿ, ಡಾ.ಮಂಜುನಾಥ ಚಲವಾದಿ, ಡಾ.ಕುಮಾರ ಸೋಮಲಿಂಗ ಬಾಳೆಕಾಯಿ, ಸೌಮ್ಯಾ, ವಿದ್ಯಾರ್ಥಿಗಳು ಇದ್ದರು. 
ಬೆಳಗಾವಿ

ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ

ರಾಘವೇಂದ್ರಗೌಡ ಭೀ ಪಾಟೀಲ್

ಯುವಜನತೆ ವ್ಯಸನಗಳಿಂದ ದೂರವಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವಂತ ಹಾಗೂ ಜಾಗೃತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕೆ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಸಂಚಾಲಕ

ಪ್ರೊ.ಶಿವಾನಂದ ಹಾಲೊಳ್ಳಿ ಕರೆ ನೀಡಿದರು.

ಸವದತ್ತಿಯ ಕೆ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಯುವ ರೆಡ್‌ಕ್ರಾಸ್ ಘಟಕಗಳ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತ ಯುವಶಕ್ತಿ-ವ್ಯಸನಮುಕ್ತ ಸಮಾಜ, ಎಸ್‌ಐಆರ್ ಜಾಗೃತಿ, ಸ್ವಚ್ಛ ಸವದತ್ತಿ ಮತ್ತು ಹಸಿರು ಭವಿಷ್ಯ ಜಾಗೃತಿ ಜಾಥಾ, ಸ್ವಚ್ಛತಾ ಹಾಗೂ ಬೀಜದ ಉಂಡೆಗಳ ಬಿತ್ತನೆ ಕಾರ್ಯಕ್ರಮದಲ್ಲಿ ಮಾತನಾಡಿ,
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಸ್ವಚ್ಛತೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಗಳಲ್ಲೂ ಭಾಗವಹಿಸಬೇಕು. ಯುವಶಕ್ತಿ ಸದುಪಯೋಗವಾದರೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ ಎಂದರು.
ಪ್ರಾಚಾರ್ಯ ಡಾ.ಮಾರುತಿ ಎಂ., ಘಟಕಗಳ ಸಂಚಾಲಕ ಡಾ.ಮಂಜುನಾಥ ಚಲವಾದಿ, ಡಾ.ಕುಮಾರ ಸೋಮಲಿಂಗ ಬಾಳಿಕಾಯಿ, ಸೌಮ್ಯಾ ಇತರರಿದ್ದರು.