ಇಟಗಿ ಸಮೀಪದ ಹಂದೂರ-ಹುಲಿಕೊತ್ತಲ ಸರ್ಕಾರಿ ಪ್ರೌಢಶಾಲೆ ಆವರಣದಲ್ಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ಕೆ ಶಾಸಕ ವಿಠ್ಠಲ ಹಲಗೇಕರ ಚಾಲನೆ ನೀಡಿದರು. ದಯಾಶೀಲ, ಪಿ.ಎಸ್.ಮಾದರ, ವಿರೇಶ ಕಂಬಳಿ, ಮಲ್ಲಿಕಾರ್ಜುನ ಉಗರಖೋಡ, ಶಿವಾನಂದ ಗೌರಿ ಇತರರಿದ್ದರು.
ಇಟಗಿ: ಮುಂದಿನ ಪೀಳಿಗೆ ಉಳಿವಿಗಾಗಿ ಗಿಡಮರ ಬೆಳೆಸಿ ಸುಂದರ ಪರಿಸರ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಸಮೀಪದ ಹಂದೂರ-ಹುಲಿಕೊತ್ತಲ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಧಾರವಾಡ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಮಾತನಾಡಿ, ಆಧುನಿಕತೆ ನೆಪದಲ್ಲಿ ಸಂಸ್ಕೃತಿ ಮರೆತು ಪ್ರಕೃತಿ ಹಾಳು ಮಾಡುತ್ತಿದ್ದು, ಪ್ರತಿಯೊಬ್ಬರೂ ಧರ್ಮಸ್ಥಳ ಸಂಸ್ಥೆ ಹಾಕಿಕೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋಣ ಎಂದರು. ಮುಖ್ಯಶಿಕ್ಷಕ ಪಿ.ಎಸ್.ಮಾದರ, ರಾಣಿ ಶುಗರ್ಸ್ ಮಾಜಿ ಉಪಾಧ್ಯಕ್ಷ ವಿರೇಶ ಕಂಬಳಿ, ಮಲ್ಲಿಕಾರ್ಜುನ ಉಗರಖೋಡ, ವಕೀಲ ಶಿವಾನಂದ ಗೌರಿ, ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಗಣಪತಿ ನಾಯ್ಕ, ದೀಪಾ ಪಾಟೀಲ, ರೂಪಾ ಕುಲಕರ್ಣಿ, ಲಕ್ಷ್ಮೀಶ ಕುರೇರ, ಎಸ್.ಬಿ.ಪಾಟೀಲ ಇತರರಿದ್ದರು.