ಪ್ರಾದೇಶಿಕ ಸಭೆಯಲ್ಲಿ ಫಲಾನುಭವಿಗಳಿಗೆ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ವಿವೇಕರಾವ ಪಾಟೀಲ ವಿಮೆ ಚೆಕ್ ವಿತರಿಸಿದರು. ಡಾ.ಶ್ರೀಕಾಂತ ವಿ.ಎನ್., ಡಾ.ರಾಕೇಶ ಸಿ.ಎಂ., ಡಾ.ಚಂದ್ರಶೇಖರ ಸಂಬಾಳ ಇತರರಿದ್ದರು. 
ಬೆಳಗಾವಿ

ಗುಣಮಟ್ಟದ ಹಾಲು ಪೂರೈಸಲಿ

ರಾಯಬಾಗ: ರೈತರು ಕೃಷಿ ಜತೆಗೆ ಹಸು ಸಾಕುವ ಮೂಲಕ ಹಾಲು ಉತ್ಪಾದನೆ ಹೆಚ್ಚಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ವಿವೇಕರಾವ ಪಾಟೀಲ ಹೇಳಿದರು.
ಪಟ್ಟಣದ ಸ್ಟೇಷನ್ ಹಿಲ್ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಾದೇಶಿಕ ಸಭೆಯಲ್ಲಿ ೧೦ ಫಲಾನುಭವಿಗಳಿಗೆ ರಾಸು(ಹಸು) ವಿಮೆ ಚೆಕ್ ವಿತರಿಸಿ ಮಾತನಾಡಿದ ಅವರು, ಗ್ರಾಹಕರು ಗುಣಮಟ್ಟದ ಹಾಲು ಪೂರೈಸಿ ಹಾಲು ಒಕ್ಕೂಟವನ್ನು ಬಲಗೊಳಿಸಬೇಕೆಂದರು.
ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ ವಿ.ಎನ್., ವ್ಯವಸ್ಥಾಪಕ ಡಾ.ರಾಕೇಶ ಸಿ.ಎಂ., ಹಾಲು ಒಕ್ಕೂಟದಿಂದಾಗುವ ಪ್ರಯೋಜನ, ರಾಸುಗಳಿಗೆ ವಿಮೆ ಮಾಡಿಸಿ ಹಣ ಪಡೆಯುವ ಮಾಹಿತಿ ವಿವರಿಸಿದರು.
ಡಾ.ಚಂದ್ರಶೇಖರ ಸಂಬಾಳ, ಮಂಜುನಾಥ ಹಿರೇಹಾಳ, ಮಂಜುನಾಥ ಗುಗಾಡ, ಗಜೇಂದ್ರ ಕಾಂಬಳೆ, ಸುನೀಲ ಜಿಲೇದಾರ ಇತರರು ಇದ್ದರು.