ಎಸ್‌ಐಆರ್ ಮಹಾ ಸಂಪರ್ಕ ಅಭಿಯಾನದ ಅಂಗವಾಗಿ ಡಾ.ವಿಶ್ವನಾಥ ಪಾಟೀಲ ಮನೆ ಮನೆಗಳಿಗೆ ಭೇಟಿ ನೀಡಿದರು. ರಿತೇಶ ಪಾಟೀಲ, ಮಡಿವಾಳಪ್ಪ ಹೋಟಿ, ವಿಶಾಲ ಬೊಗುರ, ಶಿವಪ್ರಸಾದ ಪಾಟೀಲ ಇತರರಿದ್ದರು.
ಬೈಲಹೊಂಗಲ: ನಾಗರಿಕರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಇಂಚಲಗಲ್ಲಿ ಹಾಗೂ ಹುಣಶೀಕಟ್ಟಿ ಗಲ್ಲಿಗಳಲ್ಲಿ ಎಸ್‌ಐಆರ್ ಮಹಾ ಸಂಪರ್ಕ ಅಭಿಯಾನದ ಅಂಗವಾಗಿ ಭಾನುವಾರ ಮನೆ ಮನೆಗಳಿಗೆ ಭೇಟಿ ನೀಡಿ ಮಾತನಾಡಿ, ಅರ್ಹ ಮತದಾರರು ಹೊರಗುಳಿಯದಂತೆ ಜಾಗೃತಿ ವಹಿಸಲು ಬಿಎಲ್‌ಒಗಳಿಗೆ ಸಲಹೆ ನೀಡಿದರು.
ಜಿಲ್ಲಾ ಕಾರ್ಯಕಾರಣಿ ಸದಸ್ಯ ರಿತೇಶ ಪಾಟೀಲ, ಮಾಜಿ ಮಂಡಳ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಮಂಡಳ ಪ್ರಧಾನ ಕಾರ್ಯದರ್ಶಿ ವಿಶಾಲ ಬೊಗುರ, ಉಪಾಧ್ಯಕ್ಷ ಶಿವಪ್ರಸಾದ ಪಾಟೀಲ, ಮಂಡಳ ಕಾರ್ಯದರ್ಶಿ ಉಮೇಶ ಲಾಳ, ಯುವ ಮೋರ್ಚಾ ಅಧ್ಯಕ್ಷ ಅರುಣ ಬೋಳೆತ್ತಿನ, ಯುವ ಮೋರ್ಚಾ ಕಾರ್ಯದರ್ಶಿ ಶ್ರೀಶೈಲ ಹಂಪಿಹೊಳಿ, ಪಾಂಡಪ್ಪ ಇಂಚಲ, ಸೋಮನಾಥ ಸೊಪ್ಪಿಮಠ, ಮಹಾಂತೇಶ ಗುಂಡ್ಲುರ, ವಿಜಯ ಪಾಟೀಲ, ಶ್ರೀಕಾಂತ ಮತ್ತಿಕೊಪ್ಪ, ಉಳವಪ್ಪ ಹಲಕಿ, ನಾಗಪ್ಪ ಕೋಟಗಿ, ಮಹಾಂತೇಶ ಮಲ್ಲಾಪುರ, ಅದೃಶ ಹುಚ್ಚನವರ, ವರುಣ ಪಾಟೀಲ ಇತರರಿದ್ದರು.