ಸುಟ್ಟಟ್ಟಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬವನ್ನು ಗೌಡಪ್ಪ ಖೋತ ಉದ್ಘಾಟಿಸಿದರು. ಹನುಮಂತ ಅರ್ದಾವೂರ, ವಿ.ಎಸ್.ಕನಾಳ, ಎಂ.ಡಿ.ಚಮಕೇರಿ ಇತರರಿದ್ದರು. 
ಬೆಳಗಾವಿ

ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ

ಅಥಣಿ ಗ್ರಾಮೀಣ: ನಾಲ್ಕು ಗೋಡೆಗಳ ನಡುವೆ ನಡೆಯುವ ಕಲಿಕೆ ವಿಭಿನ್ನವಾಗಿ ಸ್ಪರ್ಧಾತ್ಮಕ ಚಟುವಟಿಕೆಗಳ ಮೂಲಕ ತೆರೆದಿಡುವುದೇ ಕಲಿಕಾ ಹಬ್ಬವಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಗೌಡಪ್ಪ ಖೋತ ಹೇಳಿದರು.
ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುಟ್ಟಟ್ಟಿ ಕ್ಲಸ್ಟರ್ ಮಟ್ಟದ ೨೦೨೫-೨೫ನೇ ಸಾಲಿನ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳಿಗೆ ಹಾಗೂ ಶಾಲೆಗಳಿಗೆ ಎಲ್ಲ ತರಹದ ಮೂಲಸೌಲಭ್ಯ ಒದಗಿಸುತ್ತಿದ್ದು, ಹೆಚ್ಚು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಅರ್ದಾವೂರ ಮಾತನಾಡಿದರು. ಮಕ್ಕಳಿಂದ ಗಟ್ಟಿ ಓದು, ಕಥೆ ಹೇಳುವುದು, ಕೈಬರಹ, ಕ್ಯಾಲಿಗ್ರಫಿ, ಟ್ರಷರ್ ಹಂಟ್, ಸ್ಮರಣ ಪರೀಕ್ಷೆ, ರಸಪ್ರಶ್ನೆ ಸೇರಿ ಹಲವು ಚಟುವಟಿಕೆ ನಡೆದವು. ಸಮೂಹ ಸಂಪನ್ಮೂಲ ವ್ಯಕ್ತಿ ವಿ.ಎಸ್.ಕನಾಳ, ಎಂ.ಡಿ.ಚಮಕೇರಿ, ದಿಲೀಪ ಭಜಂತ್ರಿ, ಎಸ್.ಎಚ್.ನಾವಿ, ಎಸ್.ಎಚ್. ನಡುವಿನಮನಿ, ಕೆ.ಎಂ.ಸನದಿ, ರುಕ್ಮಿಣಿ ಮಾಳಿ, ಎಸ್.ಬಿ. ಮಾನೆ, ಎಸ್.ಬಿ.ಬಲತಿ, ಎಸ್.ಜಿ.ಪಂಗನ್ನವರ, ಶಂಕರ ಸವದಿ, ರಾಜು ಕಾಡ, ಮುಖ್ಯಶಿಕ್ಷಕ ಎಸ್.ಸಿ.ಬಿದರಿ, ಈರಪ್ಪ ಜಂಬಗಿ, ಶ್ರೀಶೈಲ ಭಜಂತ್ರಿ ಇತರರಿದ್ದರು. ರಮೇಶ ಸನದಿ ಸ್ವಾಗತಿಸಿದರು. ದುಂಡಪ್ಪ ದೊಡಮನಿ ನಿರೂಪಿಸಿದರು.