ನಿಪ್ಪಾಣಿಯ ಕೆಎಲ್‌ಇ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಬಿ.ಬಿ.ಪೊಲೀಸ್‌ಪಾಟೀಲ, ದೀಪಕ ಡಿ.ಎಚ್., ಅಪರ್ಣಾ ದೇಶಪಾಂಡೆ ಇತರರಿದ್ದರು.
ಕಲಾ ಶಿಕ್ಷಣದ ಮಹತ್ವ, ಸೃಜನಶೀಲತೆ, ಕಲ್ಪನೆ, ಆಲೋಚನೆ, ಅಭಿವ್ಯಕ್ತಿ ಹಾಗೂ ನಾವೀನ್ಯತೆಯ ಅರಿವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯ ಡಾ.ಬಿ.ಬಿ.ಪೊಲೀಸ್‌ಪಾಟೀಲ ಹೇಳಿದರು.
ಕೆಎಲ್‌ಇ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಸೋಮವಾರ ಇಂಡಿಯಾ ೌಂಡೇಷನ್ ಾರ್ ದಿ
ಆರ್ಟ್ಸ್‌ನ ಕಲಿಕಲಿಸು ಯೋಜನೆಯಡಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಎರಡು ದಿನಗಳ ಕಲಾ ಅಂತರ್ಗತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಇಂಡಿಯಾ ೌಂಡೇಷನ್ ಾರ್ ದಿ ಆರ್ಟ್ಸ್ ಕಾರ್ಯಕ್ರಮ ಸಂಯೋಜಕ ದೀಪಕ ಡಿ.ಎಚ್. ಮಾತನಾಡಿ, ಸಂಸ್ಥೆಯ ಕಲಿಕಲಿಸು ವಿಭಾಗವು ಕಳೆದ ಮೂರು ದಶಕಗಳಿಂದ ರಾಜ್ಯದ ಸರ್ಕಾರಿ ಶಾಲೆಗಳು ಹಾಗೂ ಶಿಕ್ಷಕರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಲಾ ಶಿಕ್ಷಣವು ಕಲಿಕೆಗೆ ಪರಿಣಾಮಕಾರಿ ಮಾಧ್ಯಮವಾಗಿದ್ದು, ಕಥೆ, ಹಾಡು, ನಾಟಕ, ಚಿತ್ರಕಲೆ ಸೇರಿದಂತೆ ಸ್ಥಳೀಯ
ಕಲಾ ಪ್ರಕಾರಗಳ ಮೂಲಕ ಶಾಲಾ ಕೊಠಡಿಯ ಕಲಿಕೆಯನ್ನು ಹೊರಜಗತ್ತಿನೊಂದಿಗೆ ಬೆಸೆಯುವ ಸೃಜನಶೀಲ ಪ್ರಯತ್ನವಾಗಿದೆ ಎಂದರು.
ಉಪನ್ಯಾಸಕ ರಾಜಶೇಖರಮೂರ್ತಿ ಕೆ.ವಿ.ರಂಗಾಂತರ್ಗತ, ಕೊಪ್ಪಳದ ಕಿಶನರಾವ್ ಕುಲಕರ್ಣಿ, ವಿಜಯನಗರದ ಕೊಟ್ರೇಶ ಬಿ., ಸಂಪನ್ಮೂಲ ವ್ಯಕ್ತಿ ಅಪರ್ಣಾ ಮಾತನಾಡಿದರು. ರಾಜ್ಯ ಜನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಜನಪದ ಗೀತೆ ಪ್ರಸ್ತುತಪಡಿಸಿದರು. ತರಬೇತಿಯಲ್ಲಿ 83 ಬಿ.ಇಡಿ ವಿದ್ಯಾರ್ಥಿಗಳು ಅನುಭವ ಹಂಚಿಕೊಂಡರು. ಉಪನ್ಯಾಸಕರಾದ ಎಂ.ಕೆ.ಹಂಚಿನಾಳ, ಡಾ.ಪಿ.ಎಸ್.ಉಪಾಧ್ಯೆ, ಎಂ.ಎ.ಮಹಾಜನ, ಪಿ.ಆರ್.ಖೋತ್, ಜೆ.ಬಿ.ಬಡಚಿ, ಎಸ್.ಎಂ.ಪಾಟೀಲ, ಋತುಜಾ ಜಂಬಗಿ, ಸುಪ್ರಿತಾ ಕೊಟಬಾಗಿ, ಕೆ.ಬಿ. ಗಿರಿಮಲ್ಲನವರ ಇತರರಿದ್ದರು.