ಚಿಕ್ಕೋಡಿ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವೇಷ ಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೊಂದಿಗೆ ಮುಖ್ಯಶಿಕ್ಷಕ ಡಿ.ಎಸ್.ಕೋಳಿ, ಶಿಕ್ಷಕ ಎಸ್.ಎ.ಕಮತೆ, ರಾಜಾರಾಮ ರಜಪೂತ ಇತರರು ಇದ್ದರು.
- ಎಸ್.ಎ.ಕಮತೆ ಅಭಿಮತ
- ವೇಷ ಭೂಷಣ ಸ್ಪರ್ಧೆಗೆ ಚಾಲನೆ ಸನ್ಮಾನ ಸಮಾರಂಭ
ಚಿಕ್ಕೋಡಿ: ಮಕ್ಕಳಲ್ಲಿ ಅಕ್ಷರ ಜ್ಞಾನ ಬೆಳೆಸುವುದರ ಜತೆಗೆ ಅವರ ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಶಿಕ್ಷಕರು ಹಾಗೂ ಪಾಲಕರು ಪ್ರೋತ್ಸಾಹಿಸಬೇಕು ಎಂದು ಶಿಕ್ಷಕ ಎಸ್.ಎ.ಕಮತೆ ಹೇಳಿದರು.
ಇಲ್ಲಿನ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವೇಷ ಭೂಷಣ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡುವುದರಿಂದ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಅವರು ತಮ್ಮ ಪ್ರತಿಭೆ ಪ್ರದರ್ಶನದಲ್ಲಿ ಹಿನ್ನಡೆ ಹೊಂದುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕ ಡಿ.ಎಸ್.ಕೋಳಿ ಮಾತನಾಡಿ, ಶಾಲೆಯಲ್ಲಿ ಈ ರೀತಿ ಸ್ಪರ್ಧೆ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ವಿವಿಧ ಭಾಷೆ, ಸಂಸ್ಕೃತಿ, ಸಾಧಕರ ಜೀವನ ಚರಿತ್ರೆ ಅರಿತು ಅವರಂತೆ ಬದುಕಬೇಕೆಂಬುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಚಿಕ್ಕೋಡಿ ದಕ್ಷಿಣ ವಲಯದ ಕ್ಷೇತ್ರ ಸಂಪನ್ಮೂಲ ಅಧಿಕಾರಿ ರಾಜಾರಾಮ ರಜಪೂತ ಮಾತನಾಡಿ, ಮಕ್ಕಳು ಸಾಧಕರ ಬಗ್ಗೆ ಅಧ್ಯಯನ ಮಾಡಿ ಅವರ ಆದರ್ಶ, ವ್ಯಕ್ತಿತ್ವವನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಪಾಲಕರು ಮಕ್ಕಳಿಗೆ ಉತ್ತಮ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾದ ವೇಷ ಭೂಷಣ ತೋಡಿಸಿ ಪ್ರೋತ್ಸಾಹಿಸಬೇಕು ಎಂದರು.
ಮುಖ್ಯಶಿಕ್ಷಕ ಬಿ.ಡಿ.ರುಕಡೆ ಇತರರಿದ್ದರು. ಪ್ರೀತಂ ಕುಂಬಾರ ಸ್ವಾಗತಿಸಿದರು. ಅನ್ವಿತಾ ನವಲಿಹಾಳಕರ ನಿರೂಪಿಸಿದರು.