ಬೆಳಗಾವಿಯಲ್ಲಿ ಈಚೆಗೆ ಜರುಗಿದ ಏಣಗಿ ಬಾಳಪ್ಪ ಸ್ಮರಣೆಯ ನಾಟಕೋತ್ಸವದಲ್ಲಿ ಡಾ.ಬಸವರಾಜ ಜಗಜಂಪಿ ಮಾತನಾಡಿದರು. ಡಾ.ರಾಮಕೃಷ್ಣ ಮರಾಠೆ, ಡಾ.ಎಚ್.ಬಿ.ರಾಜಶೇಖರ, ಶಿರೀಷ ಜೋಶಿ, ಬಾಬಾಸಾಹೇಬ ಕಾಂಬಳೆ, ರಮೇಶ ಜಂಗಲ ಇತರರಿದ್ದಾರೆ.
ಬೆಳಗಾವಿ: ನಾಟ್ಯಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ ಪ್ರಯುಕ್ತ ನಗರದ ಕನ್ನಡ ಭವನದಲ್ಲಿ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಇಲಾಖೆ, ರಂಗ ಸೃಷ್ಟಿ ಕಲಾತಂಡ, ಕನ್ನಡ ಭವನದ ಸಹಯೋಗದಲ್ಲಿ ಮೂರು ದಿನಗಳ ನಾಟಕೋತ್ಸವ ಆಯೋಜಿಸಲಾಗಿತ್ತು.
ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಏಣಗಿ ಬಾಳಪ್ಪನವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಬೇಕು, ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣಗೊಳ್ಳಬೇಕೆಂದು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ನಾಟಕೋತ್ಸವ ಏರ್ಪಡಿಸಲಾಗಿತ್ತು.
ಈಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ, ರಂಗಕರ್ಮಿಗಳಾದ ಯಶವಂತ ಸರದೇಶಪಾಂಡೆ, ರಾಜು ತಾಳಿಕೋಟೆ, ಡಿ.ಹನುಮಕ್ಕ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಅನ್ನಪೂರ್ಣ ಅಶೋಕ ಮಳಗಲಿ ಅವರನ್ನು ಸ್ಮರಿಸಲಾಯಿತು.
ಮೊದಲ ದಿನ ರಂಗಸಂಪದ ತಂಡದಿಂದ ‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನಗೊಂಡಿತು. ನಾಟಕಕಾರ ಝಕೀರ ನದ್ಾ ರಚನೆಯ ‘ನೆಲಮುಗಿಲು’ ಮತ್ತು ‘ಹಾಲು ಬಟ್ಟಲದೊಳಗಿನ ಪಾಲು’ ಕೃತಿ ಬಿಡುಗಡೆಗೊಳಿಸಲಾಯಿತು. ನೀಲಗಂಗಾ ಚರಂತಿಮಠ, ಡಾ.ಗುರುದೇವಿ ಹುಲೆಪ್ಪನವರಮಠ, ಸುಭಾಸ ಏಣಗಿ, ಸರಜೂ ಕಾಟ್ಕರ್, ಶೈಲಜಾ ಭಿಂಗೆ, ಅರವಿಂದ ಕುಲಕರ್ಣಿ, ಸವಿತಾ ಭೈರಪ್ಪ, ಎಂ.ಕೆ.ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಎರಡನೇ ದಿನ ಬಸವರಾಜ ಜಗಜಂಪಿ, ರಮೇಶ ಜಂಗಲ್, ಶಿರೀಷ ಜೋಶಿ, ವಿನೋದ ಅಂಬೇಕರ, ಬಾಬಾಸಾಹೇಬ ಕಾಂಬಳೆ, ಪಿ.ಜಿ.ಕೆಂಪಣ್ಣವರ, ಡಾ.ರಾಮಕೃಷ್ಣ ಮರಾಠೆ, ಬಸವರಾಜ ನಿಂಬಾಳ, ಡಾ.ಎಚ್.ಬಿ.ರಾಜಶೇಖರ ಅವರನ್ನು ಸನ್ಮಾನಿಸಲಾಯಿತು. ನಂತರ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ‘ಹಾಲು ಬಟ್ಟಲದೊಳಗಿನ ಪಾಲು’ ನಾಟಕ ಪ್ರದರ್ಶನಗೊಂಡಿತು.
ಸಮಾರೋಪದಲ್ಲಿ ಎಲ್.ಎಸ್.ಶಾಸ್ತ್ರಿ, ಯ.ರು.ಪಾಟೀಲ, ಬಸವರಾಜ ರೊಟ್ಟಿ, ಮಧುಕರ ಗುಂಡೇನಟ್ಟಿ, ರವಿ ಕೋಟಾರಗಸ್ತಿ, ಆನಂದ ಪುರಾಣಿಕ, ಎಸ್.ಎ.ಅರಕೇರಿ, ಅರವಿಂದ ಹುನಗುಂದ, ರವಿ ಭಜಂತ್ರಿ, ಆನಂದ ಭಿಂಗೆ ಅವರನ್ನು ಸನ್ಮಾನಿಸಲಾಯಿತು. ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ‘ನೆಲಮುಗಿಲು’ ನಾಟಕ ಪ್ರದರ್ಶನಗೊಂಡಿತು.