ನಾಗರಮುನ್ನೋಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು. ಸಿದ್ದಪ್ಪ ಮರ‌್ಯಾಯಿ, ಸುರೇಶ ಬೆಲ್ಲದ, ರಾಜಮಾ ಮುಲ್ತಾನಿ, ಶಿವಪುತ್ರ ಮನಗೂಳಿ, ನಿಜಾಮ್ ೆಂಡಾರಿ, ಎಂ.ಬಿ.ಆಲೂರೆ, ಸಂಜು ಬಾನೆ, ಲಕ್ಷ್ಮೀಬಾಯಿ ಮರ‌್ಯಾಯಿ ಇತರರಿದ್ದರು.  
ಬೆಳಗಾವಿ

ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಿ

ನಾಗರಮುನ್ನೋಳಿ: ಗುತ್ತಿಗೆದಾರರು ಗುಣಮಟ್ಟ ಕಾಮಗಾರಿ ಒತ್ತು ನೀಡಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಗ್ರಾಮದಲ್ಲಿ ಶನಿವಾರ ಗ್ರಾಮ ವಿಕಾಸ ಯೋಜನೆಯಡಿ 32 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‌್ಯಾಯಿ ಮಾತನಾಡಿ, ಗ್ರಾಮ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಕೆಲಸ ಮಾಡಿದಾಗ ಗ್ರಾಮ ಅಭಿವೃದ್ಧಿಯಾಗಲು ಸಾಧ್ಯ ಎಂದರು.