ಬೆಳಗಾವಿಯ ವಾಣಿಜ್ಯೋಮ ಸಂಘಕ್ಕೆ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಸ್ವಪ್ನಿಲ್ ಶಾ, ಉದಯ ಜೋಶಿ, ರಾಜೇಂದ್ರ ಮುತಗೇಕರ, ಮನೋಜಕುಮಾರ ಮತ್ತಿಕೊಪ್ಪ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ : ವಾಣಿಜ್ಯೋದ್ಯಮ ಸಂಘ(ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್)ಕ್ಕೆ 2026-27ನೇ ಸಾಲಿನ ಆಡಳಿತ ಮಂಡಳಿಗೆ ಸ್ವಪ್ನಿಲ್ ಶಾ ನೂತನ ಅಧ್ಯಕ್ಷ, ಉದಯ ಜೋಶಿ ಹಿರಿಯ ಉಪಾಧ್ಯಕ್ಷ, ರಾಜೇಂದ್ರ ಮುತಗೇಕರ ದ್ವಿತೀಯ ಉಪಾಧ್ಯಕ್ಷ, ಮನೋಜಕುಮಾರ ಮತ್ತಿಕೊಪ್ಪ ಗೌರವ ಕಾರ್ಯದರ್ಶಿ, ವಿನಿತ ಹರಕುಣಿ ಜಂಟಿ ಗೌರವ ಕಾರ್ಯದರ್ಶಿ ಹಾಗೂ ರಮೇಶ ಲದ್ದಡ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ನಿರ್ಗಮಿತ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ, ಗೌರವ ಕಾರ್ಯದರ್ಶಿ ಸತೀಶ ಕುಲಕರ್ಣಿ ಉಪಸ್ಥಿತಿಯಲ್ಲಿ ನಡೆದ ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ವ್ಯಾಪಾರ ವಲಯದಿಂದ ಸಂಜೀವ ಕತ್ತಿಶೆಟ್ಟಿ, ರೋಹಿತ ಕಪಾಡಿಯಾ, ವಿಕ್ರಂ ಜೈನ, ಪ್ರಶಾಂತ ಕಳ್ಳಿಮನಿ, ಅಪ್ಪಾಸಾಹೇಬ ಗುರವ, ಸಂಜಯ ಪೋದ್ದಾರ, ವಿಜಯ ದರಗಶೆಟ್ಟಿ, ಸಚಿನ ಹಂಗಿರ್ಗೇಕರ, ವೈವ ವೆರ್ಣೇಕರ, ಎಂ.ಕೆ. ಹೆಗಡೆ, ನಿತಿನ ಪೊರವಾಲ್ ಹಾಗೂ ಕೈಗಾರಿಕಾ ವಲಯದಿಂದ ಸಚಿನ ಸಬ್ನಿಸ, ಸತೀಶ ಕುಲಕರ್ಣಿ, ರಾಜೇಶ ಮುಚಂಡಿಕರ, ಅಶೋಕ ಕೋಳಿ, ಆನಂದ ದೇಸಾಯಿ, ಸಂದೀಪ ಬಾಗೇವಾಡಿ, ದಯಾನಂದ ನೇತಲ್ಕರ ಆಡಳಿತ ಮಂಡಳಿಗೆ ಸದಸ್ಯರಾಗಿದ್ದಾರೆ. ಎರಡು ವಲಯದಿಂದ ಸುಧೀರ ಚೌಗುಲೆ ಮತ್ತು ಬಸವರಾಜ ರಾಂಪುರೆ ವಾರ್ಷಿಕ ಸದಸ್ಯರಾಗಿದ್ದಾರೆ.