ಮುರಗೋಡ ಮಹಾಂತ ದುರದುಂಡೀಶ್ವರ ಮಠದಲ್ಲಿ ಅನ್ನ ದಾಸೋಹ ನಡೆಸುವಂತೆ ನೀಲಕಂಠ ಸ್ವಾಮೀಜಿಗೆ ಅಣ್ಣಾಸಾಹೇಬ ಜೊಲ್ಲೆ 10 ಲಕ್ಷ ರೂ. ಮೊತ್ತದ ಚೆಕ್ ನೀಡಿದರು. ಅಪ್ಪಾಸಾಹೇಬ ಕುಲಗೂಡೆ, ಶಾಸಕಿ ಶಶಿಕಲಾ ಜೊಲ್ಲೆ, ಮಹಾಂತೇಶ ದೊಡಗೌಡರ, ಅರವಿಂದಗೌಡ ಪಾಟೀಲ, ವಿರೂಪಾಕ್ಷ ಮಾಮನಿ ಇತರರಿದ್ದರು. 
ಬೆಳಗಾವಿ

ಬಿಡಿಸಿಸಿ ಬ್ಯಾಂಕ್ ಉನ್ನತಿಗೆ ಪ್ರಯತ್ನ

ಮುರಗೋಡ : ಬಿಡಿಸಿಸಿ ಬ್ಯಾಂಕ್ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಈ ಬ್ಯಾಂಕ್ ಬೆಳವಣಿಗೆಗೆ ಮುರಗೋಡ ಮಹಾಂತ ಶಿವಯೋಗಿಗಳ ಕೊಡುಗೆ ಅಪಾರ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸ್ಥಳೀಯ ಮಹಾಂತ ದುರದುಂಡೀಶ್ವರ ಮಠದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ತಾಲೂಕಿನ ರೈತರ ಸಮಸ್ಯೆಗೆ ಬಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಸ್ಪಂದಿಸಲಿದೆ ಎಂದರು.
ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ಜನಪರ ಸೇವೆ ಮಾಡುವವರಿಗೆ ಉತ್ತಮ ಭವಿಷ್ಯವಿದ್ದು, ಆಸ್ತಿಗಿಂತ ಜನಮೆಚ್ಚುಗೆಗಳಿಸಿ ಶ್ರೀಮಂತರಾಗಲಿ ಎಂದು ಆಶೀರ್ವದಿಸಿದರು.
ಮಾಜಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗೂಡೆ, ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಬ್ಯಾಂಕ್ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ಶ್ರೀಮಠಕ್ಕೆ ಪ್ರತಿವರ್ಷ ಅನ್ನ ದಾಸೋಹ ಉದ್ದೇಶಕ್ಕೆ ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ 10 ಲಕ್ಷ ರೂ. ಚೆಕ್ ನೀಡಲಾಯಿತು.
ನಿರ್ದೇಶಕರಾದ ಮಹಾಂತೇಶ ದೊಡಗೌಡರ, ಅರವಿಂದಗೌಡ ಪಾಟೀಲ, ವಿರೂಪಾಕ್ಷ ಮಾಮನಿ, ನೀಲಕಂಠ ಕಪ್ಪಲಗುದ್ದಿ, ಈಶ್ವರ ಉಳ್ಳಾಗಡ್ಡಿ, ಬಿಡಿಸಿಸಿ ಬ್ಯಾಂಕ್ ಮ್ಯಾನೇಜರ್ ಗುರು ಮೆಟಗುಡ್ಡ, ವಿ.ಬಿ.ದೇಸಾಯಿ, ಅಶೋಕ ಶೆಟ್ಟರ, ಸಚಿನ ದೇಸಾಯಿ, ಶಂಕರ ಮಾಡಲಗಿ, ಕುಮಾರ ಪೂಜೇರಿ, ಈರಣ್ಣ ಸಿದ್ಧನಗೌಡರ, ವಿವಿಧ ಪಿಕೆಪಿಎಸ್ ಸಂಘದವರು ಇದ್ದರು.