ಕವಲಗುಡ್ಡ ಗ್ರಾಮದಲ್ಲಿ ಮುರಾರ್ಜಿ ವಸತಿಶಾಲೆಯ ಕಟ್ಟಡ ನಿರ್ಮಾಣಕ್ಕೆ ರಾಜು ಕಾಗೆ ಚಾಲನೆ ನೀಡಿದರು. ಅಮರೇಶ್ವರ ಮಹಾರಾಜರು, ವೀರಣ್ಣ ವಾಲಿ ಇತರರಿದ್ದರು. 
ಬೆಳಗಾವಿ

ಶೈಕ್ಷಣಿಕ ಪ್ರಗತಿಯಿಂದ ಸಮಾಜದ ವಿಕಾಸ ಸಾಧ್ಯ

ಕಾಗವಾಡ: ಸರ್ಕಾರ ನೀಡುವ ಅನುದಾನವನ್ನು ಗುಡಿ-ಗುಂಡಾರ ನಿರ್ಮಾಣಕ್ಕೆ ಉಪಯೋಗಿಸುವುದಕ್ಕಿಂತ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಬಳಸಿಕೊಳ್ಳಬೇಕು. ಶೈಕ್ಷಣಿಕ ಪ್ರಗತಿಯಿಂದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ರಾಜು ಕಾಗೆ ಹೇಳಿದರು.
ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ಮಂಗಳವಾರ 17 ಕೋಟಿ ರೂ. ಅನುದಾನದ ಮುರಾರ್ಜಿ ದೇಸಾಯಿ ವಸತಿಶಾಲೆ ಕಟ್ಟಡ ನಿರ್ಮಾಣ ಹಾಗೂ ಮದಭಾಂವಿ, ತೆವರಟ್ಟಿ ಗ್ರಾಮಗಳಲ್ಲಿ ತಲಾ 10 ಲಕ್ಷರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಕ್ಷೇತ್ರದ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಮತ್ತು 6 ಕೆರೆ ತುಂಬುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು. ಬಸವೇಶ್ವರ ಏತ ನೀರಾವರಿ ಯೋಜನೆಗೆ ಜಮೀನು ನೀಡಿದ ರೈತರಿಗೆ 400 ಕೋಟಿ ರೂ. ಪರಿಹಾರ ನೀಡಬೇಕಿದ್ದು, ಈ ಕುರಿತು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು.
ಕೌಲಗುಡ್ಡ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು. ತಾಪಂ ಇಒ ವೀರಣ್ಣ ವಾಲಿ, ಮಡಿವಾಳಪ್ಪ ಪಾಟೀಲ, ಮಾಜಿ ಜಿಪಂ ಸದಸ್ಯ ವಿನಾಯಕ ಬಾಗಡೆ, ಮದಭಾಂವಿ ಗ್ರಾಪಂ ಅಧ್ಯಕ್ಷ ಮಹಾದೇವ ಕೋರೆ, ಮುಖಂಡರಾದ ಮಹಾದೇವ ಮಾಳಿ, ನಿಜಗುಣಿ ಮಗದುಮ್ಮ, ಶಂಕರ ವಾಂಡಿಮಾಳಿ, ಈಶ್ವರ ಕೋಳಿ, ಶಿವಪ್ಪ ಹಣಮರಡ್ಡಿ, ವಿಠ್ಠಲ ಐಹೊಳೆ, ಚನ್ನಪ್ಪ ಐಹೊಳೆ, ಹನುಮಂತ ಕಾಂಬಳೆ, ಲಕ್ಷ್ಮಣ ಘಟನಟ್ಟಿ, ರಾಜು ಪಾಟೀಲ, ಬಾಲಾಜಿ ಪಾಟೀಲ, ಎ.ಐ.ಸಂತೋಷ, ನವೀನ ನಾಗನೂರ, ಗುತ್ತಿಗೆದಾರ ಬಾಲಾಜಿ ಪಾಟೀಲ ಇತರರಿದ್ದರು.