ಬಸವ ಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಮಾರೋಪದಲ್ಲಿ ಆರ್‌ಸಿಯು ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿ ಯಶೋಧಾ ಕಂಬಾರನ್ನು ಸನ್ಮಾನಿಸಲಾಯಿತು. ಡಾ.ಸೋಮಶೇಖರ ವಾಲಿ, ಡಾ.ಬಿ.ಜಿ.ಕುಲಕರ್ಣಿ ಇತರರಿದ್ದರು.
- ಡಾ.ಸೋಮಶೇಖರ ವಾಲಿ ಅಭಿಮತ
- ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಲಹೆ
ಚಿಕ್ಕೋಡಿ: ಕೆಎಲ್‌ಇ ಸಂಸ್ಥೆಯ ಸಪ್ತರ್ಷಿಗಳು, ಮಹಾದಾನಿಗಳು ಮತ್ತು ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಸಾರಥ್ಯದಲ್ಲಿ ಸಂಸ್ಥೆ ನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ.ಸೋಮಶೇಖರ ವಾಲಿ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಬಸವ ಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿ, ನಿರಂತರ ಅಧ್ಯಯನ, ಪರಿಶ್ರಮ, ಉತ್ತಮ ಗುರಿ, ಪ್ರಾಮಾಣಿಕ ಪ್ರಯತ್ನ ಸಾಧನೆಗೆ ದಾರಿಯಾಗಿವೆ. ಸಾಹಿತ್ಯ ಮತ್ತು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಷ್ಟಗಳನ್ನು ಎದುರಿಸಿ ಗೆಲ್ಲುವ ಮನೋಭಾವ, ಹೊಸ ಅವಿಷ್ಕಾರಗಳ ತಿಳಿವಳಿಕೆ, ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆ ಬಿಟ್ಟು ಸಕಾರಾತ್ಮಕ ಚಿಂತನೆ, ಆಶಾಭಾವನೆ ಬೆಳೆಸಿಕೊಳ್ಳಬೇಕು. ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.
ಉಪ ಪ್ರಾಚಾರ್ಯ ಪ್ರೊ.ಸುಧೀರ ಕೋಠಿವಾಲೆ, ಒಕ್ಕೂಟದ ಉಪಾಧ್ಯಕ್ಷೆ ಪ್ರೊ.ಎಂ.ಆರ್.ಛಾಯಾ, ಕ್ರೀಡಾ ವಿಭಾಗದ ಉಪಾಧ್ಯಕ್ಷ ಡಾ.ಎಚ್.ಇ.ಬಸವರಾಜಪ್ಪ, ಡಾ.ವಿನಾಯಕ ಮಂಜಲಾಪುರ, ಪ್ರೊ.ರಾಜೇಶ ನಾಯ್ಕ, ಪ್ರೊ.ಪ್ರವೀಣಕುಮಾರ ವಾಘಮೋರೆ, ಡಾ.ಎಸ್.ಎಂ.ಪಾಟೀಲ, ಡಾ.ಸಿದ್ಧಲಿಂಗ ಎಂ., ಪ್ರೊ.ರೋಹಿತ ತೇಲಿ, ಡಾ.ಲಕ್ಷ್ಮೀಕಾಂತ ನಾಯಕ, ಡಾ.ಆರ್.ರಾಮಣ್ಣ, ಪ್ರೊ.ಆನಂದ ಆರ್. ಇತರರಿದ್ದರು.