ಅರಟಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ತರಗತಿಗಳ ಸಮಾರೋಪ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ನಾಗರತ್ನಾ ಹೆಗಡೆ, ಸುಧಾ ನಾಯಕ, ಆಶಾ ಭರುಗೂರ ಇತರರಿದ್ದರು. 
ಬೆಳಗಾವಿ

ಶಿಕ್ಷಣ ಸುಧಾರಣೆಗೆ ಆದ್ಯತೆ ಅಗತ್ಯ

ರಾಘವೇಂದ್ರಗೌಡ ಭೀ ಪಾಟೀಲ್
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮೂರು ತಿಂಗಳ ವಿಶೇಷ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರು ಸರ್ಕಾರಿ ಶಾಲೆಗಳಲ್ಲಿ ಟ್ಯೂಷನ್ ಕ್ಲಾಸ್ ತೆರೆದು ಶಿಕ್ಷಕರಿಗೆ ಗೌರವಧನ ಕೊಟ್ಟು ಮಕ್ಕಳ ಶಿಕ್ಷಣ ಸುಧಾರಣೆಗೆ ಆದ್ಯತೆ ನೀಡುತ್ತಿದ್ದಾರೆ ಎಂದರು.
ರಾಮಪ್ಪ ಪೂಜಾರಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ರಜಬಲಿ ಮೇಲಿನಮನಿ, ಧಾರವಾಡ ಶ್ರೀಕ್ಷೇತ್ರ ಧರ್ಮಸ್ಥಳ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಸುಧಾ ನಾಯಕ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ ಭರುಗೂರ, ವಲಯ ಮೇಲ್ವಿಚಾರಕ ಮಹಾಂತೇಶ ಪಿ.ಎಂ., ಗ್ರಾಪಂ ಮಾಜಿ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಉಪನ್ಯಾಸಕ ಸದಾನಂದ ಮಾಡಗ್ಯಾಳ, ಶಬಾನಾ ಮುಜಾವರ್, ಗ್ರಾಪಂ ಕಾರ್ಯದರ್ಶಿ ಆನಂದ ಗಿರಿಜಾಗೋಳ, ಮಲ್ಲಿಕಾರ್ಜುನ ಪಾಟೀಲ, ಯಲ್ಲಪ್ಪ ಹಟ್ಟಿ, ವಿಠ್ಠಲ ಹಟ್ಟಿ, ಶರಣಯ್ಯ ಹಿರೇಮಠ, ಸುರೇಶ ರಜಪೂತ, ಪಿ.ಎಸ್.ಮಸಲಿ ಇತರರಿದ್ದರು.