ಬೆಳಗಾವಿ ತಾಲೂಕಿನ ಬೆನ್ನಾಳಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯಲ್ಲಪ್ಪ ಹಿಮ್ಮಡಿ, ರಾಮು ಗಾಣಿಗೇರ, ಮಾರುತಿ ಅಕ್ಕೆನ್ನವರ, ಶಿವಾನಂದ ಹುಲ್ಲೆನ್ನವರ, ಲಕ್ಷ್ಮಣ ಅಕ್ಕೆನ್ನವರ ಇತರರು ಪಾಲ್ಗೊಂಡಿದ್ದರು.  
ಬೆಳಗಾವಿ

ಶಿಕ್ಷಣವೇ ಅಲೆಮಾರಿಗಳ ಸಂಜೀವಿನಿ

ಬೆಳಗಾವಿ: ಆಸ್ತಿ ಮತ್ತು ವಿಳಾಸವಿಲ್ಲದ ಅಲೆಮಾರಿಗಳಿಗೆ ಶಿಕ್ಷಣವೇ ಸಂಜೀವಿನಿ. ಅಪಾರ ಕಲಾಸಂಪತ್ತಿರುವ ಅಲೆಮಾರಿಗಳು ಅಂಬೇಡ್ಕರ್‌ರ ನಿಜವಾದ ವಾರಸುದಾರರು ಎಂದು ಸಾಹಿತಿ ಯಲ್ಲಪ್ಪ ಹಿಮ್ಮಡಿ ಹೇಳಿದರು.
ತಾಲೂಕಿನ ಬೆನ್ನಾಳಿ ಗ್ರಾಮದಲ್ಲಿ ಅಲೆಮಾರಿ ಚೆನ್ನದಾಸರ ಸಮುದಾಯವು ‘ನೌಕರರ ಚಿತ್ತ ಅಲೆಮಾರಿ ಸಮುದಾಯದತ್ತ’ ಅಭಿಯಾನದಡಿ ಏರ್ಪಡಿಸಿದ್ದ ‘ವ್ಯಕ್ತಿತ್ವ ವಿಕಸನ; ಉದ್ಯೋಗ ಮಾರ್ಗದರ್ಶನ ಮತ್ತು ಸಮಾಲೋಚನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಮಂತರಿಗೆ, ಭೂಮಾಲೀಕರಿಗೆ ಒಂದೇ ವೃತ್ತಿಯಾದರೆ ಅಪಾರ ಕೌಶಲ್ಯ ಇರುವ ಅಲೆಮಾರಿಗಳಿಗೆ ನೂರಾರು ವೃತ್ತಿಗಳಿವೆ. ಆದರೆ ಶಿಕ್ಷಣದ ವಂಚನೆಯಿಂದ ಅವಕಾಶಗಳು ಕೈ ತಪ್ಪುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಚೆನ್ನದಾಸರ ನೌಕರರ ಒಕ್ಕೂಟದ ಅಧ್ಯಕ್ಷ ರಾಮು ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ಶಾನೂರಕುಮಾರ ಗಾಣಿಗೇರ, ಮಾರುತಿ ಅಕ್ಕೆನ್ನವರ, ಶಿವಾನಂದ ಹುಲ್ಲೆನ್ನವರ, ಮಹೇಂದ್ರ ಗಾಣಿಗೇರ, ತಮ್ಮಾಣಿ ಗಾಣಿಗೇರ, ನಾಗೇಶ ಕಾಮಶೆಟ್ಟಿ, ಲಕ್ಷ್ಮಣ ಅಕ್ಕೆನ್ನವರ, ವಸಂತ ಅಕ್ಕೆನ್ನವರ, ಸದಾಶಿವ ಜಾಗನೂರ, ಮುತ್ತಪ್ಪ ಗಾಣಿಗೇರ, ಸಂತೋಷ ಅಕ್ಕೆನ್ನವರ, ಬಸವರಾಜ ಹುಲ್ಲೆನ್ನವರ, ಸತ್ಯಪ್ಪ ಗೊಳಸಂಗಿ, ತಮ್ಮಾಣಿ ತುಳಸಿಗೇರಿ, ಪರಶು ಮುರೆನ್ನವರ, ಭೀಮಸಿ ಜೋಳನ್ನವರ, ಹನುಮಂತ ಮುರೆನ್ನವರ, ರಾಣಪ್ಪ ಮುರೆನ್ನವರ ಇತರರಿದ್ದರು.
ಹನುಮಂತ ಗಾಣಿಗೇರ ಪ್ರಾಸ್ತಾವಿಕ ಮಾತನಾಡಿದರು. ವಿಠ್ಠಲ ಗೊಳಸಂಗಿ ಸ್ವಾಗತಿಸಿದರು. ಕಲ್ಲಪ್ಪ ಜೋಳನ್ನವರ ವಂದಿಸಿದರು. ಭೀಮಸಿ ಹುಲ್ಲೆನ್ನವರ ನಿರೂಪಿಸಿದರು.