ಕುಡಚಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಮಹೋತ್ಸವದ ಸಮಾರೋಪದಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾ ಅಕ್ಕ, ಶೋಭಾ ಸನದಿ, ಜೈಕುಮಾರ ಸನದಿ ಇತರರಿದ್ದರು. 
ಬೆಳಗಾವಿ

ಶಿಕ್ಷಣದಿಂದ ಉನ್ನತ ಸಾಧನೆ ಸಾಧ್ಯ

ಪ್ರಶಾಂತ ಹೂಗಾರ
ಕುಡಚಿ: ಗಂಡು, ಹೆಣ್ಣು ಎಂಬ ಭೇದಭಾವ ಮಾಡದೇ, ಇಬ್ಬರಿಗೂ ಸಮಾನ ಪ್ರೀತಿ ತೋರುವ ಮೂಲಕ ಎಲ್ಲರಿಗೂ ಒಳ್ಳೆಯ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಶಿವ ಡಂಗುರ, ಮಹಾಶಿವರಾತ್ರಿ ಮಹೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಸಾಧಕರಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಕುಡಚಿ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಿದ್ಯಾ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರತ್ನವ್ವ ಬಾಳಪ್ಪನವರ, ಪುಷ್ಪಾ ಅಕ್ಕ, ಗೀತಾ ಅಕ್ಕ, ಕಾಂಚನಾ ಕದ್ದು, ಡಾ.ಸುಷ್ಮಾ ಪಾಟೀಲ, ಖುಷಿ ಬಸಗುಂಡೆ, ಕರುಣಾ ಕದ್ದು, ಪ್ರಶಾಂತಿನಿ ಸನದಿ, ವಿದ್ಯಾ ಸಾಸಣೆ, ಅಶ್ವಿನಿ ಹಟ್ಟಿಮನಿ, ನಿರ್ಮಲಾ ಪಾಟೀಲ, ನಾಜರೀನ್ ಚಾವೂಸ್, ಅಪೂರ್ವಾ ಬಸಾಪೂರೆ, ಶೋಭಾ ಸನದಿ, ರೇಖಾ ಸಣ್ಣಕ್ಕಿ, ಅರ್ಜುನ ನಾಯಿಕವಾಡಿ, ಜೈಕುಮಾರ ಸನದಿ, ದತ್ತಾ ಸಣ್ಣಕ್ಕಿ, ಯಲ್ಲಪ್ಪ ವಡ್ಡರ, ಶ್ರೀಶೈಲ ದರೂರೆ, ಬೀರಪ್ಪ ನರಟ್ಟಿ ಇತರರಿದ್ದರು. ಶಿಕ್ಷಕ ವೈ.ಆರ್.ಯಲ್ಲಟ್ಟಿ ನಿರೂಪಿಸಿದರು.