ಬೋರಗಾಂವಾಡಿಯಲ್ಲಿ ಹಮ್ಮಿಕೊಂಡಿದ್ದ ಶಿವಬಸವ ಕೋ-ಆಪ್ ಸೊಸೈಟಿಯನ್ನು ಜಗದೀಶ ಕವಟಗಿಮಠ ಉದ್ಘಾಟಿಸಿದರು. ಸಂಜಯ ಶಿಂತ್ರೆ, ಗೀತಾಂಜಲಿ ಮಾನೆ, ಭರತ ಜಂಗಟೆ, ಸದಾಶಿವ ಭದರಗಡೆ, ಗೋವಿಂದ ಪಾಟೀಲ, ಮಲಕಾರಿ ಕೋಳಿ ಇದ್ದರು.
- ಜಗದೀಶ ಕವಟಗಿಮಠ ಅಭಿಮತ
- ಶಿವಬಸವ ಸೊಸೈಟಿ ಉದ್ಘಾಟನೆ
ಬೋರಗಾಂವ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಕರ್ನಾಟಕ ಸೌಹಾರ್ದ ಫೆಡರೇಷನ್ ನಿರ್ದೇಶಕ ಜಗದೀಶ ಕವಟಗಿಮಠ ಹೇಳಿದರು.
ಸಮೀಪದ ಬೋರಗಾಂವಾಡಿಯಲ್ಲಿ ಸೋಮವಾರ ಶ್ರೀ ಶಿವಬಸವ ಕೋ-ಆಪ್ ಸೊಸೈಟಿ ಉದ್ಘಾಟಿಸಿ ಮಾತನಾಡಿ, ಗಡಿಭಾಗದ ರೈತರು ಹೆಚ್ಚು ಕಬ್ಬು ಬೆಳೆಯುವುದರಿಂದ ಸಹಕಾರ ಸಂಘಗಳು, ಬ್ಯಾಂಕ್‌ಗಳು ಮತ್ತು ಸೊಸೈಟಿಗಳ ಮೂಲಕ ಆರ್ಥಿಕ ವ್ಯವಹಾರ ನಡೆಸುತ್ತಿದ್ದಾರೆ. ರೈತರು, ಹೈನುಗಾರರು ಗ್ರಾಮೀಣ ಪ್ರದೇಶದ ಸಣ್ಣ ಮತ್ತು ದೊಡ್ಡ ವ್ಯಾಪಾರಸ್ಥರು ಸೊಸೈಟಿಗಳಿಂದ ಸಾಲ ಪಡೆದು ಅಭಿವೃದ್ಧಿ ಹೊಂದುತ್ತಿದ್ದಾರೆ. ಸಹಕಾರ ಸಂಘಗಳಿಂದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ಸಿಗುತ್ತಿದೆ ಎಂದರು.
ನಿರ್ದೇಶಕ ಕೃಷ್ಣಾತ ಪಾಟೀಲ ಮಾತನಾಡಿ, ಜನರಿಗೆ ಸಾಲ ಒದಗಿಸಿ ಆರ್ಥಿಕ ಜೀವನಮಟ್ಟ ಸುಧಾರಿಸಲು ಶಿವಬಸವ ಸೊಸೈಟಿ ಶ್ರಮಿಸುತ್ತಿದ್ದು, ಪ್ರಗತಿಗೆ ಎಲ್ಲರೂ ಸಹಕರಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಅಣ್ಣಾಸಾಹೇಬ ಹಾವಲೆ, ಉದ್ಯಮಿ ಸುರೇಶದಾದಾ ಪಾಟೀಲ, ಉತ್ತಮ ಮಾನೆ ಮಾತನಾಡಿದರು.
ಚಿಂಚಣಿ ಮಠದ ಉತ್ತರಾಧಿಕಾರಿ ಶಿವಪ್ರಸಾದ ದೇವರು ಸಾನ್ನಿಧ್ಯ ವಹಿಸಿದ್ದರು. ವಕೀಲ ಸಂಜಯ ಶಿಂತ್ರೆ, ಗ್ರಾಪಂ ಅಧ್ಯಕ್ಷೆ ಗೀತಾಂಜಲಿ ಮಾನೆ, ಭರತ ಜಂಗಟೆ, ವಕೀಲ ಗುಳಗುಳೆ, ಎಸ್.ಕೆ.ಖೋತ, ಸಂಸ್ಥಾಪಕ ಅಧ್ಯಕ್ಷ ಸದಾಶಿವ ಭದರಗಡೆ, ಉಪಾಧ್ಯಕ್ಷ ಗೋವಿಂದ ಪಾಟೀಲ, ಮಲಕಾರಿ ಕೋಳಿ, ಭರ್ಮು ಪೂಜಾರಿ, ಅಶೋಕ ಟಕಮಾರೆ, ಕೃಷ್ಣಾ ಖೋತ, ಬಾಳಾಸಾಹೇಬ ಬಡಿಗೇರ, ನಿರ್ಮಲಾ ಪಾಟೀಲ, ಅಮೃತ ಕೋಳಿ,
ಕೃಷ್ಣಾ ಸಾತಪುತೆ ಇತರರಿದ್ದರು.