ನಿಪ್ಪಾಣಿ ನಗರದಲ್ಲಿ ಹಮ್ಮಿಕೊಂಡಿದ್ದ ಇಂಧನ ರಹಿತ ಅಡುಗೆ ಸ್ಪರ್ಧೆಯಲ್ಲಿ ಸಿದ್ಧಪಡಿಸಿದ ಆಹಾರವನ್ನು ಶಶಿಕಲಾ ಜೊಲ್ಲೆ ವೀಕ್ಷಿಸಿದರು. ಗೀತಾ ಪಾಟೀಲ, ಶಕುಂತಲಾ ಧೋನವಡೆ, ಲಕ್ಷ್ಮೀ ಖೋತ ಇತರರಿದ್ದರು.
ನಿಪ್ಪಾಣಿ: ಇಂಧನ ಉಳಿತಾಯ ಅಗತ್ಯವಾಗಿದ್ದು, ಪರ್ಯಾಯ ಅಡುಗೆ ವಿಧಾನಗಳ ಬಗ್ಗೆ ಅರಿವು ಮೂಡಿಸುವಲ್ಲಿ ಇಂತಹ ಸ್ಪರ್ಧೆ ಮಹತ್ವದ ಪಾತ್ರ ವಹಿಸುತ್ತವೆ. ಮಹಿಳೆಯರು ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ ತಯಾರಿಕೆಯಲ್ಲಿ ತೋರಿದ ಆಸಕ್ತಿ ಶ್ಲಾಘನೀಯ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ವೆಂಕಟೇಶ ಮಂದಿರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬುಧವಾರ ಆಯೋಜಿಸಿದ್ದ ಇಂಧನರಹಿತ ಅಡುಗೆ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ನಗರ ವಿಭಾಗದಲ್ಲಿ ಮಾಧವಿ ಸೊಲಾಪುರಕರ ಪ್ರಥಮ, ಸುಮಾ ದುಮ್ಮಾಳೆ ದ್ವಿತೀಯ, ಸುಷ್ಮಾ ಖೋತ ತೃತೀಯ ಸ್ಥಾನ ಪಡೆದರು. ಗ್ರಾಮೀಣ ವಿಭಾಗದಲ್ಲಿ ಭಾಗ್ಯಶ್ರೀ ಜಾಧವ ಪ್ರಥಮ, ಮೋಹಿನಿ ಖಡೆ ದ್ವಿತೀಯ ಹಾಗೂ ಅಕ್ಷತಾ ಪವಾರ ತೃತೀಯ ಸ್ಥಾನ ಗಳಿಸಿದರು. ವಿಜೇತರಿಗೆ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರ ವಿತರಿಸಲಾಯಿತು.
ಹಾಲಶುಗರ್ ಉಪಾಧ್ಯಕ್ಷೆ ಗೀತಾ ಪಾಟೀಲ, ಸಂಚಾಲಕರಾದ ಜಯವಂತ ಭಾಟಲೆ, ರಾಜು ಗುಂಡೆಷಾ, ಸುನೀಲ ಪಾಟೀಲ, ಚಿಕ್ಕೋಡಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಕುಂತಲಾ ಧೋನವಡೆ, ಲಕ್ಷ್ಮೀ ಖೋತ ಇತರರಿದ್ದರು. ವಿಜಯ ರಾವುತ್ ವಂದಿಸಿದರು.