ವಿಜಯವಾಣಿ ಸುದ್ದಿಜಾಲ ಕಕ್ಕೇರಿ
ಸಮೀಪದ ಸುರಾಪುರ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಮೇ 15ರಿಂದ 19ರವರೆಗೆ ನಡೆಯಲಿದೆ. ಮೇ15ರಂದು ಬೆಳಗ್ಗೆ 7ಗಂಟೆಗೆ ನವಗ್ರಹ ಪೂಜೆ, ರುದ್ರಾಭಿಷೇಕ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 4ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದೆ. ಚಿದಾನಂದಯ್ಯ ಹಿರೇಮಠ ಸಾನ್ನಿಧ್ಯ ವಹಿಸಲಿದ್ದಾರೆ. ಯಕ್ಕುಂಡಿ ಎಂ.ಎ.ಕುಮಾರೇಶ್ವರ ಸಂಸ್ಥಾನ ವಿರಕ್ತಮಠ ಪಂಚಾಕ್ಷರಿ ಸ್ವಾಮೀಜಿ, ನಿಚ್ಚಣಕಿ ಶಶಿಕಾಂತಯ್ಯ ಸ್ವಾಮೀಜಿ, ಶಾಸಕ ಆರ್.ವಿ.ದೇಶಪಾಂಡೆ, ಜೆಡಿಎಸ್ ಮುಖಂಡ ನಾಸೀರ್ ಬಾಗವಾನ, ಭೂದಾನಿ ಶಕುಂತಲಾ ಬೋಗಲೆ, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಸೀರ್ ಗಿರಿಯಾಲ, ನಗರ ಭೂ ಇಲಾಖೆ ಹುಬ್ಬಳ್ಳಿ ಪ್ರಕಾಶ ಹೊಸಮನಿ, ಸಮಾಜ ಸೇವಕರಾದ ನರಸಿಂಹ ಗವೆ, ಅಬ್ದುಲ್ ಅಜೀಜ್ ಗಿರಿಯಾಲ ಭಾಗವಹಿಸಲಿದ್ದಾರೆ.
ಶನಿವಾರ ಬೆಳಗ್ಗೆ 7 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.
ಬಿಳಕಿ ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು, ಸುರಪುರ ಕೇರವಾಡ ಅಡವಿ ಸಿದ್ಧೇಶ್ವರ ಮಠದ ಪ್ರಭು ಅಡವಿ ಸಿದ್ಧೇಶ್ವರ ಸ್ವಾಮೀಜಿ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಬನಶಂಕರಿ ಟ್ರೇಡರ್ಸ್ ಮಾಲೀಕ ಶಂಕರ ಪ್ಯಾಟಿ ಗೌಡ್ರ ಇತರರು ಭಾಗವಹಿಸಲಿದ್ದಾರೆ. ಶನಿವಾರ ರಾತ್ರಿ 9ಕ್ಕೆ ಏಣಗಿಯ ಜೆಕೆ ಮೆಲೋಡಿಸ್ ನಡೆಸಿಕೊಡಲಿರುವ ಹಾಸ್ಯರಸಮಂಜರಿ ಕಾರ್ಯಕ್ರಮವನ್ನು ಮಾಜಿ ಶಾಸಕ ಅರವಿಂದ ಪಾಟೀಲ ಉದ್ಘಾಟಿಸಲಿದ್ದಾರೆ. ಮೇ 17ರಂದು ಸವಾಲ ಭಜನಾ ಕಾರ್ಯಕ್ರಮ, ಮೇ 18ರಂದು ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ, ಮೇ 19ರಂದು ಸಂತರಿಂದ ದಿಂಡಿ ಉತ್ಸವ ಹಾಗೂ ಜಾತ್ರಾ ಸಮಾರೋಪ ಸಮಾರಂಭ ಜರಗಲಿದೆ ಎಂದು ದುರ್ಗಾದೇವಿ ದೇವಸ್ಥಾನ ಅಧ್ಯಕ್ಷ ಪ್ರದೀಪ ಗವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.