ಬೆಳಗಾವಿಯಲ್ಲಿ ಶನಿವಾರ ನಶೆಮುಕ್ತ ಅಭಿಯಾನ ಪ್ರಯುಕ್ತ ಹಮ್ಮಿಕೊಂಡಿದ್ದ ವಾಕ್ಥಾನ್ಗೆ ಸಚಿವರಾದ ರಾಮಲಿಂಗಾ ರೆಡ್ಡಿ, ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಭಗವಾನ ಬಿ.ಸಿ., ಮೊಹಮ್ಮದ್ ರೋಷನ್, ಲಕ್ಷ$್ಮಣರಾವ ಚಿಂಗಳೆ ಇತರರಿದ್ದರು.
ಬೆಳಗಾವಿ: ಮಾದಕ ವಸ್ತುಗಳು ಶಾಲೆಗಳಿಗೂ ಪ್ರವೇಶಿಸಿದ್ದು, ವಿದ್ಯಾರ್ಥಿಗಳೂ ವ್ಯಸನಿಗಳಾಗುತ್ತಿದ್ದಾರೆ. ಸರ್ಕಾರ, ಪೊಲೀಸರ ಜತೆಗೆ ಜನರು ಕೈಜೋಡಿಸಿದರೆ ಮಕ್ಕಳನ್ನಷ್ಟೇ ಅಲ್ಲದೆ, ರಾಜ್ಯವನ್ನೇ ಡ್ರಗ್ಸ್ ಮಾಫಿಯಾದಿಂದ ಕಾಪಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಜೀವ ಗಾಂಧಿ ಆರೋಗ್ಯ ವಿಾನಗಳ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಸಂ, ರಾಜೀವ ಗಾಂಧಿ ಆರೋಗ್ಯ ವಿಾನಗಳ ವಿವಿ, ದಿಶಾಬೋಧ ಫೌಂಡೇಷನ್ ಮತ್ತು ನಾಕೋರ್ಟಿಕ್ಸ್ ಕಂಟ್ರೋಲ್ ಬ್ಯೂರೋ ಸಹಯೋಗದಲ್ಲಿ ಸ್ವಾಸ್ಥ$್ಯ ಭಾರತ ಶ್ರೇಷ್ಠ ಭಾರತ ಹಾಗೂ ನಶೆಮುಕ್ತ ಭಾರತ, ನಶೆಮುಕ್ತ ಕರ್ನಾಟಕ, ನಶೆಮುಕ್ತ ಕ್ಯಾಂಪಸ್ ಹಾಗೂ ಅಂಗದಾನ ಜಾಗೃತಿ ಅಭಿಯಾನದ ಪ್ರಯುಕ್ತ ನಗರದಲ್ಲಿ ಶನಿವಾರ ಆಯೋಜಿಸಿದ್ದ ವಾಕ್ಥಾನ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಚಟವಗಾಲಿ ಎಂಬ ಕಾರಣಕ್ಕೆ ತಿನ್ನುವ ಪದಾರ್ಥಗಳಲ್ಲೂ ನಶೆ ವಸ್ತು ಸೇರಿಸುತ್ತಿದ್ದಾರೆ. ಮೆಕ್ಸಿಕೋದಂತಹ ದೇಶದಲ್ಲಿ ಸರ್ಕಾರ ಮತ್ತು ಡ್ರಗ್ಸ್ ಮಾಫಿಯಾ ಮಧ್ಯೆಯೇ ಸಮರ ನಡೆದಿದೆ. ಇಡೀ ಜಗತ್ತಿನ ಹಳ್ಳಿ ಹಳ್ಳಿಗೆ ಡ್ರಗ್ಸ್ ತಲುಪಿಸುವಷ್ಟರ ಮಟ್ಟಿಗೆ ಈ ಜಾಲ ಬೆಳೆದಿದ್ದು, ನಶೆಮುಕ್ತ ಮನೆಗೆ ಕಂಕಣಬದ್ಧಾರಗಬೇಕು ಎಂದು ಹೇಳಿದರು.
ರಾಜೀವ ಗಾಂಧಿ ವಿವಿ ಕುಲಪತಿ ಡಾ.ಭಗವಾನ ಬಿ.ಸಿ.ಮಾತನಾಡಿ, ಉತ್ತರದ ರಾಜ್ಯಗಳ ನಂತರ ಡ್ರಗ್ ಪೆಡ್ಲರ್ಗಳ ಕಣ್ಣು ಕರ್ನಾಟಕದ ಮೇಲೆ ಬಿದ್ದಿದೆ. ದೇಶಾದ್ಯಂತ ಶೇ.30ರಷ್ಟಿದ್ದ ಮಾದಕ ವ್ಯಸನದ ವಿದ್ಯಾರ್ಥಿಗಳ ಪ್ರಮಾಣ ಶೇ.63ಕ್ಕೆ ಏರಿದೆ. ಇದರ ವಿರುದ್ಧ ಸಮರ ಸಾರಬೇಕು ಎಂದು ಕರೆ ನೀಡಿದರು.
ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಆಸೀಫ್ ಸೇಠ್, ಮಾಜಿ ಶಾಸಕ ಶ್ಯಾಮ ಘಾಟಗೆ, ಬುಡಾ ಅಧ್ಯಕ್ಷ ಲಕ್ಷ$್ಮಣರಾವ್ ಚಿಂಗಳೆ, ದಿಶಾಬೋಧ ಫೌಂಡೇಷನ್ನ ಕಾಂತಿ ಶೆಟ್ಟಿ, ಎ.ಡಿ.ಧ್ರುವಕುಮಾರ, ಡಾ.ಸಂದೀಪ ಪಟ್ಟಣಶೆಟ್ಟಿ, ಡಾ. ವಿಜಯಕುಮಾರ ಲಮಾಣಿ, ನಾಕೋರ್ಟಿಕ್ಸ್ ಕಂಟ್ರೋಲ್ ಬ್ಯೂರೋದ ವಿಕಾಸ ಸಿಂಗ್, ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ, ಪಾಲಿಕೆ ಆಯುಕ್ತ ಎಂ.ಕಾರ್ತಿಕ, ಡಾ.ರವಿ ಪಾಟೀಲ ಇತರರಿದ್ದರು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ವಾಕ್ಥಾನ್ ವಿವಿಧ ವೃತ್ತಗಳ ಮೂಲಕ ಸರ್ದಾರ್ಸ್ ಮೈದಾನದಲ್ಲಿ ಸಮಾರೋಪಗೊಂಡಿತು. 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
700 ಕೆಜಿ ಗಾಂಜಾ ಜಪ್ತಿ
ಬೆಳಗಾವಿ ಜಿಲ್ಲೆಯಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ವಿರುದ್ಧ ಪೊಲೀಸರು ಸಾಕಷ್ಟು ಕಡಿವಾಣ ಹಾಕಿದ್ದಾರೆ. ಆರು ತಿಂಗಳಿನಲ್ಲಿ 700 ಕೆಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.