ಎಸ್ಸಿ ಒಳ ಮೀಸಲಾತಿ ಸಂಬಂಧಿತ ನ್ಯಾಯಮೂರ್ತಿ ನಾಗಮೋಹನದಾಸ ಆಯೋಗದ ವರದಿ ತಿರಸ್ಕರಿಸಬೇಕೆಂದು ಆಗ್ರಹಿಸಿ ಕಾಗವಾಡದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ತಹಸೀಲ್ದಾರ್ ರವೀಂದ್ರ ಹಾದಿಮನಿಗೆ ಮನವಿ ಸಲ್ಲಿಸಲಾಯಿತು. ಸಂಜಯ ತಳವಳಕರ, ಸಚಿನ ಪೂಜಾರಿ, ರವಿ ಕುರಣಿ ಇತರರಿದ್ದರು. 
ಬೆಳಗಾವಿ

ನಾಗಮೋಹನದಾಸ ವರದಿ ಕೈಬಿಡಿ

ಪ್ರಶಾಂತ ಹೂಗಾರ
ಕಾಗವಾಡ: ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಎಸ್ಸಿ ಒಳ ಮೀಸಲಾತಿ ಸಂಬಂಧಿತ ನ್ಯಾಯಮೂರ್ತಿ ನಾಗಮೋಹನದಾಸ ಆಯೋಗದ ವರದಿ ತಿರಸ್ಕರಿಸಬೇಕೆಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ತಹಸೀಲ್ದಾರ್ ರವೀಂದ್ರ ಹಾದಿಮನಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ದಲಿತ ಮುಖಂಡ ಸಂಜಯ ತಳವಳಕರ ಮಾತನಾಡಿ, ನ್ಯಾ.ನಾಗಮೋಹನದಾಸ ಆಯೋಗದ ವರದಿ ಆಧರಿಸಿ ಸರ್ಕಾರ ನಿಗದಿಪಡಿಸಿರುವ 6:6:4:1 ಮೀಸಲಾತಿ ವರ್ಗೀಕರಣದ ಶಿಾರಸಿಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಸರ್ಕಾರ ಜಾರಿಗೊಳಿಸುವ ಹುನ್ನಾರ ನಡೆಸುತ್ತಿರುವುದು ಖಂಡನಾರ್ಹ. ಸರ್ಕಾರ ನಾಗಮೋಹನದಾಸ ವರದಿ ತಿರಸ್ಕರಿಸಬೇಕು. ಮಾ.25ರಂದು ಬೆಂಗಳೂರಿನ ಫ್ರೀಡಂ
ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಎಸ್ಸಿ ಬಲಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಸಚಿನ ಪೂಜಾರಿ, ಮಚೇಂದ್ರ ಖಾಂಡೇಕರ, ರವಿ ಕುರಣಿ, ಜಯಪಾಲ ಬಡಿಗೇರ, ವಿಜಯ ಅಸೋದೆ, ರವಿ ಕಾಂಬಳೆ, ಉದಯ ಖೋಡೆ, ಮೀರಾಸಾಹೇಬ ಕಾಂಬಳೆ, ದಯಾನಂದ ಕಾಂಬಳೆ, ವಿನೋದ ಕಾಂಬಳೆ, ವಿದ್ಯಾಧರ ದೊಂಡಾರೆ, ಈಶ್ವರ ಕಾಂಬಳೆ, ಮಹಾಂತೇಶ ಬಡಿಗೇರ, ಬಾಪು ದೊಂಡಾರೆ, ಸಾವಕಾರ ಬಸ್ತವಾಡೆ, ಶೇಖರ ಹೊನಕಾಂಬಳೆ ಇತರರಿದ್ದರು.