ಚಿಕ್ಕೋಡಿ ಪಟ್ಟಣದ ಜಿಟಿಟಿಸಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯುವ ಕೌಶಲ ದಿನಾಚರಣೆ ಕಾರ್ಯಕ್ರಮವನ್ನು ಸುರೇಶ ಘರಬುಡೆ ಉದ್ಘಾಟಿಸಿದರು. ಪಾರ್ವತಿ ಕಮತೆ, ಶೀತಲಕುಮಾರ ದೇವಲಾಪುರ, ವಿಮಲಾ ಚಿನಕೇಕರ, ಸಚಿನ ಮನಗೂಳಿ ಇತರರಿದ್ದರು. 
ಬೆಳಗಾವಿ

ಉದ್ಯಮಿಯಾಗುವ ಕನಸು ಇಟ್ಟುಕೊಳ್ಳಿ

ಚಿಕ್ಕೋಡಿ: ಸ್ಪರ್ಧಾತ್ಮಕ ಯುಗದಲ್ಲಿ ತಾಂತ್ರಿಕ ಕೌಶಲ ಬೆಳೆಸಿಕೊಳ್ಳುವುದರಿಂದ ವಿಪುಲ ಅವಕಾಶಗಳು ದೊರೆಯುತ್ತವೆ ಎಂದು ಉದ್ಯಮಿ ಸುರೇಶ ಘರಬುಡೆ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ (ಜಿಟಿಟಿಸಿ) ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಸಭಾ ಭವನದಲ್ಲಿ ಉನ್ನತಿ ಸ್ವಯಂಸೇವಾ ಸಂಸ್ಥೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಯುವ ಕೌಶಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇವಲ ಕನಸು ಕಾಣುವದರಿಂದ ಸಾಧನೆ ಅಸಾಧ್ಯ. ಉದ್ಯೋಗಿಯಾಗುವುದಕ್ಕಿಂತ ಉದ್ಯಮಿಯಾಗುವ ಕನಸು ವಿದ್ಯಾರ್ಥಿಗಳದ್ದಾಗಬೇಕು ಎಂದರು.
ಉದ್ಯಮಿ ಪಾರ್ವತಿ ಕಮತೆ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಅಡುಗೆಯವಳಾಗಿ ಕೆಲಸ ಮಾಡಿದ ತಾನು ಇದೀಗ ಹತ್ತಾರು ಜನರಿಗೆ ಕೆಲಸ ಕೊಡುವ ಗಾರ್ಮೆಂಟ್ ನಿರ್ವಹಣೆ ಮಾಡುವಷ್ಟು ಬೆಳೆದಿರುವುದು ಹೆಮ್ಮೆ ಎಣಿಸುತ್ತದೆ ಎಂದರು.
ಜಿಟಿಟಿಸಿ ಕೇಂದ್ರದ ಪ್ರಾಚಾರ್ಯ ಶೀತಲಕುಮಾರ ದೇವಲಾಪುರ, ವಿಮಲಾ ಚಿನಕೇಕರ, ಸಚಿನ ಮನಗೂಳಿ, ಶ್ರುತಿ ಹೆಗ್ಗರೆ, ಚಂದ್ರಶೇಖರ ಚಿನಕೇಕರ, ಸುರೇಶ ಸಾವಿತ್ರಿಗೋಳ, ಸ್ವಪ್ನಿಲ ಹೂಗಾರ, ವಿಜಯ ಜುಟ್ಟದವರ, ಚನವೀರ ಕಂಬಾರ ಇತರರಿದ್ದರು.