ಅಥಣಿ ವಿದ್ಯಾವರ್ಧಕ ಶಾಲೆ ವಿದ್ಯಾರ್ಥಿಗಳಿಗೆ ಡಾ.ಸಂಪತ್‌ಕುಮಾರ ಶಿವಣಗಿ ೌಂಡೇಷನ್ ವತಿಯಿಂದ ಶಿಷ್ಯವೇತನ ನೀಡಲಾಯಿತು. ಡಾ.ಉದಯಾ ಶಿವಣಗಿ, ಶಿವಶಂಕರ ಹಂಜಿ, ಪ್ರಕಾಶ ಮಹಾಜನ, ಶ್ರೀಶೈಲ ಸಂಕ, ಸುನೀಲ ಶಿವಣಗಿ, ವಿಜಯಕುಮಾರ ಬುರ್ಲಿ ಇತರರಿದ್ದರು. 
ಬೆಳಗಾವಿ

ಡಾ.ಶಿವಣಗಿ ಕೊಡುಗೆ ಸ್ಮರಣೀಯ

ಪ್ರಶಾಂತ ಹೂಗಾರ
ಅಥಣಿ: ಮಹಾದಾನಿ ಡಾ.ಸಂಪತ್‌ಕುಮಾರ ಶಿವಣಗಿ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಕೊಡುಗೆ ಸ್ಮರಣೀಯವಾಗಿದೆ ಎಂದು ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಶಂಕರ ಹಂಜಿ ಹೇಳಿದರು.
ಸ್ಥಳೀಯ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಡಾ.ಸಂಪತ್‌ಕುಮಾರ ಶಿವಣಗಿ ಆಂಗ್ಲ ಮಾಧ್ಯಮ ಶಾಲೆ ಸಭಾಂಗಣದಲ್ಲಿ ಡಾ.ಸಂಪತ್‌ಕುಮಾರ ಶಿವಣಗಿ ಪುಣ್ಯಸ್ಮರಣೆ ನಿಮಿತ್ತ ಡಾ.ಸಂಪತ್‌ಕುಮಾರ ಶಿವಣಗಿ ೌಂಡೇಷನ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 10 ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಿ ಮಾತನಾಡಿ,
ದಾನ ಪರಂಪರೆ ಮುಂದುವರಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಸಂಸ್ಥೆ ಉಪಾಧ್ಯಕ್ಷ ಪ್ರಕಾಶ ಮಹಾಜನ ಮಾತನಾಡಿ, ಅಮೆರಿಕದಲ್ಲಿ ಮೊದಲ ಬಾರಿಗೆ ದೀಪಾವಳಿ ಆಚರಿಸಿದ ಕೀರ್ತಿ ಡಾ.ಸಂಪತ್‌ಕುಮಾರಗೆ ಸಲ್ಲುತ್ತದೆ. ಅಲ್ಲಿಯ ಅಧ್ಯಕ್ಷ ಜಾರ್ಜ್ ಬುಷ್ ಅವರೊಂದಿಗೆ ಅಲ್ಲಿರುವ ಭಾರತೀಯರು ಕೂಡಿ ದೀಪಾವಳಿ ಆಚರಿಸುವಂತೆ ಮಾಡಿದ್ದಾರೆ. ಅಮೆರಿಕದ ಒಂದು ರಸ್ತೆಗೆ ಡಾ.ಸಂಪತ್‌ಕುಮಾರ ಶಿವಣಗಿ ಲೇನ್ ಎಂದು ಹೆಸರಿಟ್ಟಿರುವುದು ಶ್ಲಾಘನೀಯ ಎಂದರು.
ಡಾ.ಉದಯಾ ಶಿವಣಗಿ ಮಾತನಾಡಿ, ಪತಿ ನಮ್ಮೊಂದಿಗಿಲ್ಲ ಎನ್ನುವ ಕೊರಗನ್ನು ಅಥಣಿ ವಿದ್ಯಾವರ್ಧಕ ಸಂಸ್ಥೆ ಮರೆಸಿದೆ. ಡಾ.ಸಂಪತ್‌ಕುಮಾರ ಸೇವಾಕೈಂಕರ್ಯವನ್ನು ನಾವು ಮುನ್ನಡೆಸುತ್ತೇವೆ. ವಿದ್ಯಾರ್ಥಿಗಳು ಉತ್ತಮ ಜ್ಞಾನ ಪಡೆದು ಸಮಾಜಮುಖಿ ಸೇವೆಗೆ ಮುಂದಾಗುವಂತೆ ಸಲಹೆ ನೀಡಿದರು.
ಅನುಷ್ಕಾ ಗಾಯಕವಾಡ, ಸೌರಭ ಜಿರಗಾಳ, ಓಂಕಾರ ಪಾಟೀಲ, ಭಾಗಶ್ರೀ ಹಂಜಿ, ಸುಶಾಂತ ಕೋಳಿ, ಸಮೃದ್ಧಿ ಘಟಕಾಂಬಳೆ, ಕೆ.ಎಸ್.ಶ್ರೇಯಾ, ವೈಷ್ಣವಿ ಮಡಿವಾಳರ, ನಿರಂಜನ ದರೂರ, ಐಶ್ವರ್ಯಾ ನಿಂಗನೂರಗೆ ಪ್ರಮಾಣಪತ್ರ ಹಾಗೂ 10 ಸಾವಿರ ರೂ. ನಗದು ವಿತರಿಸಲಾಯಿತು.
ಡಾ.ಉದಯಾ ಶಿವಣಗಿ ಅವರನ್ನು ಸನ್ಮಾನಿಸಲಾಯಿತು. ವಕೀಲೆ ೆಮಿಲಿನಾ, ಸಂಸ್ಥೆ ನಿರ್ದೇಶಕರಾದ ಶ್ರೀಶೈಲ ಸಂಕ, ಅಶೋಕ ಬುರ್ಲಿ, ಸುನೀಲ ಶಿವಣಗಿ, ವಿಜಯಕುಮಾರ ಬುರ್ಲಿ, ಸಂತೋಷ ಶಿವಣಗಿ, ಕೈಲಾಶ ಶಿವಣಗಿ, ಪ್ರಸಾದ ಶಿವಣಗಿ, ಮುಖ್ಯಶಿಕ್ಷಕರಾದ ಪಿ.ಡಿ.ಚನಗೌಡರ, ಎಂ.ಎಸ್.ದೇಸಾಯಿ, ಮಹಾದೇವ ಧರಿಗೌಡ ಇತರರಿದ್ದರು.