ಡಾ. ಸರಜೂ ಕಾಟ್ಕರ್  
ಬೆಳಗಾವಿ

ಬಾಬು ಜಗಜೀವನ ರಾಮ ಪ್ರಶಸ್ತಿಗೆ ಡಾ.ಸರಜೂ ಆಯ್ಕೆ

ಬೆಳಗಾವಿ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಮತ್ತು ಕಲೆ, ಸಾಹಿತ್ಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದವರಿಗೆ ಕೊಡ ಮಾಡುವ 2026ನೇ ಸಾಲಿನ ಪ್ರತಿಷ್ಠಿತ ಡಾ. ಬಾಬು ಜಗಜೀವನ ರಾಮ ಪ್ರಶಸ್ತಿಗೆ ಬೆಳಗಾವಿಯ ಸಾಹಿತಿ,ಕವಿ, ಪತ್ರಕರ್ತ ಡಾ. ಸರಜೂ ಕಾಟ್ಕರ್ ಆಯ್ಕೆಯಾಗಿದ್ದಾರೆ.
ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಸಾಹಿತಿ ಡಾ.ಸರಜೂ ಕಾಟ್ಕರ ಅವರು ಜನಿಸಿದ್ದು 1953 ಆಗಸ್ಟ್ 14ರಂದು ಹುಬ್ಬಳ್ಳಿಯಲ್ಲಿ . ಕರ್ನಾಟಕ ವಿ.ವಿ.ಯಿಂದ ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ ವಿಷಯವಾಗಿ (1994) ಪಿಎಚ್‌ಡಿ ಪಡೆದರು. ಕನ್ನಡ ಪತ್ರಿಕೆಯ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.
ಮರಾಠಿ ದಲಿತ ಸಾಹಿತ್ಯ, ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು, ದೇವರಾಯ, ಜುಲೈ 22, 1947, ಬಾಜೀರಾಯ ಮಸ್ತಾನಿ, ಸಾವಿತ್ರಿಬಾಯಿ ಫುಲೆ, ಗೌರೀಪುರ, ದಂಗೆ ಹೀಗೆ 80ಕ್ಕೂ ಅಧಿಕ ಪುಸ್ತಕ ಬರೆದಿದ್ದಾರೆ. ಇವುಗಳಲ್ಲಿ ದೇವರಾಯ, ಇಂಗಳ ಮಾರ್ಗ, ಜುಲೈ 22,1947 ಹೀಗೆ ಕಾದರಂಬರಿ ಚಲನಚಿತ್ರವಾಗಿವೆ.ಅದರಲ್ಲಿ ಪ್ರಮುಖವಾಗಿ ಜುಲೈ 22,1947‘ಚಲನಚಿತ್ರದ ಕಥೆಗೆ ರಾಜ್ಯ ಪ್ರಶಸ್ತಿ ಪಡೆದಿದೆ. ಇನ್ನೂಳಿದ ಕಾದಂಬರಿ ಆಧಾರದ ನಾಲ್ಕು ಚಲನಚಿತ್ರಗಳಿಗೆ ಸಾಮಾಜಿಕ ಕಳಕಳಿ ಆಧಾರದ ಮೇಲೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿವೆ. ಒಟ್ಟಿನಲ್ಲಿ ಅವರು ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಸಾಧಕರಾಗಿದ್ದಾರೆ.
ಪ್ರಶಸ್ತಿ ಪುರಸ್ಕೃತರಿಗೆ ತಲಾ 5ಲಕ್ಷ ರೂ.ನಗದು ಬಹುಮಾನ ಹಾಗೂ 20 ಗ್ರಾಂ ಚಿನ್ನದ ಪದಕ ಒಳಗೊಂಡಿದೆ. ಏ.5ರಂದು ಬೆಂಗಳೂರಿನ ವಿಧಾನಸೌದ ಸಭಾಂಗಣದಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ.
........