ಹುಕ್ಕೇರಿಯ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಶಾಖೆಯ ೩ನೇ ವಾರ್ಷಿಕೋತ್ಸವ ಆಚರಿಸಲಾಯಿತು. ಸದಾನಂದ ಕರಾಳೆ, ಸಿದಗೌಡ ಪಾಟೀಲ, ಕೆಂಪಣ್ಣ ನೇರ್ಲಿ, ಬಸವರಾಜ ಪಾಟೀಲ ಇತರರಿದ್ದರು.
- ಅಧ್ಯಕ್ಷ ಸದಾನಂದ ಕರಾಳೆ ಮಾಹಿತಿ
- ಮೂರನೇ ವಾರ್ಷಿಕೋತ್ಸವ
ಹುಕ್ಕೇರಿ: ಪಟ್ಟಣದ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ಶಾಖೆ ಪ್ರಾರಂಭಿಸಿ ಇಂದಿಗೆ ೩ ವರ್ಷ ಪೂರ್ಣಗೊಂಡಿದ್ದು, ಸೊಸೈಟಿ ಇಲ್ಲಿಯವರೆಗೆ ೧೪.೧೦ ಕೋಟಿ ರೂ. ಠೇವು, ೨.೩೧ ಲಕ್ಷ ರೂ. ಸಾಲ ವಿತರಿಸಿದೆ ಎಂದು ಡಾ.ಪ್ರಭಾಕರ ಕೋರೆ ಸೊಸೈಟಿ ಶಾಖೆ ಅಧ್ಯಕ್ಷ ಸದಾನಂದ ಕರಾಳೆ ಹೇಳಿದರು.
ಪಟ್ಟಣದ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೩ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಸೊಸೈಟಿ ಕಾರ್ಯನಿರ್ವಹಿಸುತ್ತಿದೆ. ಚಿಕ್ಕೋಡಿಯ ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಬಾವನಸೌಂದತ್ತಿಯ ಶಿವಶಕ್ತಿ ಶುರ‍್ಸ್ಗೆ ಕಬ್ಬು ಪೂರೈಸಿದ ಹುಕ್ಕೇರಿ ಪಟ್ಟಣದ ಸುತ್ತಮುತ್ತಲಿನ ರೈತರಿಗೆ ಶಾಖೆಯಿಂದ ತ್ವರಿತವಾಗಿ ಕಬ್ಬಿನ ಬಿಲ್ ವಿತರಿಸಲಾಗುತ್ತಿದೆ. ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಆರ್‌ಟಿಜಿಎಸ್/ನೆಫ್ಟ್, ಠೇವು ಸಂಗ್ರಹ, ವಿವಿಧ ರೀತಿಯ ಸಾಲ ವಿತರಣೆ, ಸಾಮಾನ್ಯ ವಿಮೆ, ಆರೋಗ್ಯ ವಿಮೆ ಮತ್ತು ಜೀವ ವಿಮೆ ಸೇವೆ ಹಾಗೂ ಕಡಿಮೆ ಬಡ್ಡಿದರದಲ್ಲಿ ತ್ವರಿತವಾಗಿ ಬಂಗಾರ ಸಾಲ ಒದಗಿಸಲಾಗುತ್ತಿದೆ ಎಂದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರ ಕರೋಶಿ, ಶಾಖಾ ಅಭಿವೃದ್ಧಿ ಅಽಕಾರಿ ಪ್ರಧಾನಿ ಕುಂಬಾರ, ಶಾಖಾ ಸಲಹಾ ಸಮಿತಿ ಸದಸ್ಯರಾದ ಸಿದಗೌಡ ಪಾಟೀಲ, ಕೆಂಪಣ್ಣ ನೇರ್ಲಿ, ಬಸವರಾಜ ಪಾಟೀಲ, ಅಪ್ಪುಗೌಡ ಮಲಗೌಡನವರ, ಕಾಡಪ್ಪ ಮಲ್ಲಾಪುರೆ, ಅಡಿವೆಪ್ಪ ಗಡೆನ್ನವರ, ಶಶಿಧರ ಪುರಾಣಿಕ, ಅನ್ನಪ್ಪ ಕಮತೆ, ನಾರಾಯಣ ಬಡಿಗೇರ, ಶಾಖಾ ವ್ಯವಸ್ಥಾಪಕ ಸಚಿನ ಪಿಂಪಳಗಾವಿ, ಸಿಬ್ಬಂದಿ ವಿಶಾಲ ಪವಾರ, ಸಂದೀಪ ಪಾಟೀಲ, ಶಂಕರ ದೇಸಾಯಿ ಇತರರಿದ್ದರು.