ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಸೋಮವಾರ ಡಾ.ಪ್ರಭಾಕರ ಕೋರೆ ಎಸ್‌ಐಆರ್ ಸಮೀಕ್ಷೆಯ ಬಿಎಲ್‌ಒಗೆ ಮಾಹಿತಿ ಒದಗಿಸಿದರು.
ಬೆಳಗಾವಿ: ಪದ್ಮಶ್ರೀ ಡಾ.ಪ್ರಭಾಕರ ಕೋರೆ ಅವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಸೋಮವಾರ ಭಾಗಿಯಾದರು.
ಮನೆ ಮನೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಮೀಕ್ಷೆಗೆ ಚುನಾವಣಾ ಆಯೋಗದಿಂದ ನಿಯುಕ್ತರಾದ ಬೂತ್ ಮಟ್ಟದ ಅಧಿಕಾರಿಗಳಿಗೆ ಅಂಕಲಿಯಲ್ಲಿ ಡಾ.ಪ್ರಭಾಕರ ಕೋರೆ ಅಗತ್ಯ ದಾಖಲೆ ಸಹಿತ ಮಾಹಿತಿ ಸಲ್ಲಿಸಿದರು.
ಪ್ರತಿ ನಾಗರಿಕ ಮನೆಗೆ ಆಗಮಿಸುವ ಬಿಎಲ್‌ಒಗಳಿಗೆ ಸಹಕಾರ ನೀಡಿ, ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ಒದಗಿಸಿ, ತಮ್ಮ ಹೆಸರು ಹಾಗೂ ವಿವರಗಳನ್ನು ಮತದಾರರ ಪಟ್ಟಿಯಲ್ಲಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ವೇಳೆ ಡಾ.ಪ್ರಭಾರಕ ಕೋರೆ ಸಾರ್ವಜನಿಕರಿಗೆ ಕರೆ ನೀಡಿದರು.