ಅಥಣಿ ಪಟ್ಟಣದಲ್ಲಿ ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು. ಶಾಸಕ ಲಕ್ಷ್ಮಣ ಸವದಿ, ಸಿದರಾಯ ಭೋಸಗಿ, ಶಿವಲೀಲಾ ಬುಟಾಳೆ, ಭುವನೇಶ್ವರಿ ಯಂಕಚ್ಚಿ, ಕಲ್ಲೇಶ ಮಡ್ಡಿ ಇತರರಿದ್ದರು. 
ಬೆಳಗಾವಿ

ಹಸಿರು ಕ್ರಾಂತಿ ಹರಿಕಾರ ಡಾ.ಬಾಬು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಲಕ್ಷ್ಮಣ ಸವದಿ ಸ್ಮರಣೆ
  • ಡಾ.ಜಗಜೀವನರಾಮ್ ಜಯಂತಿ
ಅಥಣಿ: ಮೇಲು-ಕೀಳು ಮನೋಭಾವ ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಅನೇಕರು. ಆದರೆ, ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಕೆಲವು ನಾಯಕರಲ್ಲಿ ಡಾ.ಬಾಬು ಜಗಜೀವನರಾಮ್ ಒಬ್ಬರು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಲಿಡ್ಕರ್ ಕಾಲನಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ೧೧೯ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬು ಜಗಜೀವನರಾಮ್ ಅವರು ಸ್ವಾತಂತ್ರ‍್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಮಿತಿ ಸದಸ್ಯರಾಗಿ ಮತ್ತು ದೇಶದ ಮೊದಲ ಉಪಪ್ರಧಾನಿಯಾಗಿ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಸಮಸಮಾಜ ನಿರ್ಮಾಣ ಜತೆಗೆ ರೈತರಿಗೆ ಅನೇಕ ಯೋಜನೆ ಜಾರಿಗೆ ತಂದು ಹಸಿರು ಕ್ರಾಂತಿಯ ಹರಿಕಾರ ಎನಿಸಿದ್ದಾರೆ ಎಂದರು.
ಉಪನ್ಯಾಸಕ ಟಿ.ಎನ್.ವಂಟಗುಡಿ ಮಾತನಾಡಿ, ಬಾಬೂಜಿ ಆದರ್ಶ ಪಾಲನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ
ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರಳಯ್ಯ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ತಹಸೀಲ್ದಾರ್ ಸಿದರಾಯ ಬೋಸಗಿ, ತಾಪಂ ಇಒ ಶಿವಾನಂದ ಕಲ್ಲಾಪುರ, ಸಿಪಿಐ ಸಂತೋಷ ಹಳ್ಳೂರ, ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಪುರಸಭೆ ಸದಸ್ಯರಾದ ಕಲ್ಲೇಶ ಮಡ್ಡಿ, ವಿಲಿಯಳಮಲ್ಲೆ, ಬಸವರಾಜ ನಾಯಿಕ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಶುರಾಮ ಪತ್ತಾರ, ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಬಿಇಒ ಎಂ.ಆರ್.ಮುಂಜೆ, ಕೃಷಿ ಅಧಿಕಾರಿ ನಿಂಗಣ್ಣ ಬಿರಾದಾರ, ಸಿಡಿಪಿಒ ಮಂಜುನಾಥ ಸೌಂದಲಗೇಕರ, ಅಭಿಯಂತರ ಪ್ರವೀಣ ಹುಣಸಿಕಟ್ಟಿ, ಸದಾಶಿವ ಶಿಕರೆ, ಅನಿಲ ಸೌದಾಗರ, ದಿಲೀಪ ಕಾಂಬಳೆ, ಶಿವಾನಂದ ಸೌದಾಗರ, ಸಿದರಾಯ ಸಣ್ಣಕ್ಕಿ ಇತರರಿದ್ದರು.