ಇಟಗಿ ಗ್ರಾಮದ ಜನತಾ ಶಿಕ್ಷಣ ಪ್ರಸಾರ ಸಮಿತಿಯ ಬಿ.ಎಂ.ಸಾಣಿಕೊಪ್ಪ ಪದವಿ ಕಾಲೇಜಿನಲ್ಲಿ ಮನೆ ಮನೆಗೆ ಮನ ಮನಕ್ಕೆ ಬಾಬಾಸಾಹೇಬರು ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಕಿರುಹೊತ್ತಿಗೆ ವಿತರಿಸಲಾಯಿತು. ಆರ್.ಬಿ.ಹುಣಶೀಕಟ್ಟಿ, ಕೆ.ಬಿ.ಕಾಪೋಲಿ, ಬಿ.ಎಸ್.ಸವದಿ, ಎಸ್.ಎಸ್.ಸುಣಗಾರ ಇತರರಿದ್ದರು. 
ಬೆಳಗಾವಿ

ಡಾ.ಅಂಬೇಡ್ಕರ್ ಸಿದ್ಧಾಂತ ಪಾಲಿಸಿ

ಅರ್ಚನಾ ಜಾಧವ

ಪ್ರಮುಖ ಮುಖ್ಯಾಂಶಗಳು

  • ಆರ್.ಬಿ. ಹುಣಶೀಕಟ್ಟಿ ಮಾಹಿತಿ
  • ಕಿರುಹೊತ್ತಿಗೆ ವಿತರಣೆ
ಇಟಗಿ: ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ನೀಡಿದ ಸಮಾನತೆ, ಶಿಕ್ಷಣ, ಪ್ರಜಾಪ್ರಭುತ್ವದಂತಹ ಆದರ್ಶ ತತ್ತ್ವಸಿದ್ಧಾಂತ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಆರ್.ಬಿ.ಹುಣಶೀಕಟ್ಟಿ ಹೇಳಿದರು.
ಗ್ರಾಮದ ಜನತಾ ಶಿಕ್ಷಣ ಪ್ರಸಾರ ಸಮಿತಿಯ ಬಿ.ಎಂ.ಸಾಣಿಕೊಪ್ಪ ಪದವಿ ಕಾಲೇಜಿನಲ್ಲಿ ಎನ್‌ಎಸ್‌ಎಸ್, ಐಕ್ಯೂಎಸಿ, ಎಸ್ಸಿ, ಎಸ್ಟಿ ಘಟಕಗಳ ಅಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಿರ್ದೇಶನದಂತೆ ‘ಮನೆ ಮನೆಗೆ ಮನ ಮನಕ್ಕೆ ಬಾಬಾಸಾಹೇಬರು’ ಅಭಿಯಾನದಲ್ಲಿ ಮಾತನಾಡಿ, ಪ್ರತಿಯೊಬ್ಬ ನಾಗರಿಕರಿಗೂ ಡಾ.ಬಿ. ಆರ್.ಅಂಬೇಡ್ಕರ್ ಅವರ ಜೀವನ ಮತ್ತು ತತ್ತ್ವ ತಲುಪುವುದು ಈ ಅಭಿಯಾನದ ಉದ್ದೇಶ ಎಂದರು.
ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಬಿ.ಕಾಪೋಲಿ ಮಾತನಾಡಿ, ಎಲ್ಲರೂ ಬಾಬಾಸಾಹೇಬರು ನೀಡಿದ ಸಮಾನತೆ, ನ್ಯಾಯ, ಸಹಕಾರ ಅಳವಡಿಸಿ ಸಂವಿಧಾನದ ಆಶಯಗಳೊಂದಿಗೆ ಬದುಕಬೇಕು ಎಂದರು.
ಪ್ರಾಧ್ಯಾಪಕರಾದ ಬಿ.ಎಸ್.ಸವದಿ, ಎಸ್.ಎಸ್.ಸುಣಗಾರ, ಕೆ.ಡಿ.ಕರ್ಕಿ, ಎಂ.ಆರ್.ಶಹಾಪುರ, ಜಿ.ಎನ್.ದುರ್ಗಣ್ಣವರ ಇತರರಿದ್ದರು.