ಕೊಕಟನೂರ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಪ್ರೊ.ಅಶೋಕ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ಡಾ.ಪ್ರಭಾಕರ ಖ್ಯಾಡಿ, ಕಪಿಲ ಕಾಂಬಳೆ, ಡಾ.ವಿದ್ಯಾಶ್ರೀ ಕೋಲಕಾರ ಇತರರಿದ್ದರು.
ಅಥಣಿ ಗ್ರಾಮೀಣ: ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿಗೆ ಆದರ್ಶವಾಗಿದ್ದಾರೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಅಶೋಕ ಡಿಸೋಜಾ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ‘ಆಧುನಿಕ ಭಾರತದ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಅವರ ಕಾಣಿಕೆ: ಸಮಕಾಲೀನ ಪ್ರಸ್ತುತತೆ’ ವಿಷಯ ಕುರಿತು ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರ ಸಮಾನತೆ, ತತ್ತ್ವ ಮನ್ನಣೆ ಗಳಿಸಿವೆ ಎಂದು ತಿಳಿಸಿದರು.
ಪ್ರೊ.ಕಪಿಲ ಕಾಂಬಳೆ ಮಾತನಾಡಿದರು. ಪ್ರಾಂಶುಪಾಲ ಡಾ.ಪ್ರಭಾಕರ ಖ್ಯಾಡಿ, ಐಕ್ಯೂಎಸಿ ಸಂಯೋಜಕಿ ಡಾ.ವಿದ್ಯಾಶ್ರೀ ಕೋಲಕಾರ, ಕಾರ್ಯಕ್ರಮ ಸಂಯೋಜಕ ಡಾ.ಹುಸೇನ್ ಗಡಕರ್, ಡಾ.ದಯಾನಂದ ಎಲ್.ಎನ್., ಪಲ್ಲವಿ ಎಂ.ಎಂ., ಶೈಲಜಾ ತುಬಚಿ, ವಿನೋದಕುಮಾರ ಮೇತ್ರಿ ಇತರರಿದ್ದರು. ವೈಷ್ಣವಿ ಕುಂಬಾರ ಹಾಗೂ ಸವಿತಾ ಗಸ್ತಿ ಸ್ವಾಗತಿಸಿದರು. ರೀತು ಹಳಕಿ ನಿರೂಪಿಸಿದರು. ಡಾ.ಪ್ರಶಾಂತ ಪವಾರ ವಂದಿಸಿದರು.