Double murder convict gets life imprisonment, fined Rs 5.50 lakh
ಬೆಳಗಾವಿ: ಪೆಟ್ರೋಲ್ ಬಂಕ್ಗೆ ನುಗ್ಗಿ ಜೋಡಿ ಕೊಲೆ ಮಾಡಿ, ಹಣ ದೋಚಿಕೊಂಡು ಹೋದ ಪ್ರಕರಣದಲ್ಲಿನ ಅಪರಾಧಿಗೆ ಇಲ್ಲಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 5.50 ಲಕ್ಷ ರೂ. ದಂಡ ವಿಧಿಸಿದೆ.
ಧಾರವಾಡ ತಾಲೂಕಿನ ಕಲ್ಲಾಪುರದ ಭೀಮಪ್ಪ ಮಲ್ಲಪ್ಪ ಪೀರತಪ್ಪನವರ (27) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ. 2018ರ ಮೇ 15ರಂದು ಭೀಮಪ್ಪ, ಚನ್ನಮ್ಮನ ಕಿತ್ತೂರು ಹೊರವಲಯದ ಧಾರವಾಡ&ಬೆಳಗಾವಿ ರಸ್ತೆಯಲ್ಲಿನ ಶಿವಾ ಪೆಟ್ರೋಲ್ ಬಂಕ್ಗೆ ನುಗ್ಗಿ, ಹೊರಗಡೆ ಮಲಗಿದ್ದ ಲಿಂಗದಳ್ಳಿಯ ಮಂಜುನಾಥ ಪಟ್ಟಣಶೆಟ್ಟಿ (23) ಹಾಗೂ ಕಚೇರಿಯಲ್ಲಿ ಮಲಗಿದ್ದ ತಿಗಡೊಳ್ಳಿಯ ಮುಸ್ತಾಕ್ ಬೀಡಿ(35) ಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿ, ಕೌಂಟರ್ ಡ್ರಾ ಒಡೆದು ಹಣ ದೋಚಿಕೊಂಡು ಹೋದ ಬಗ್ಗೆ ಚನ್ನಮ್ಮನ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಧೀಶ ಸುಭಾಷ ಸಂಕದ ಶನಿವಾರ ತೀರ್ಪು ನೀಡಿದ್ದಾರೆ.