ಸವದತ್ತಿ ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು. 
ಬೆಳಗಾವಿ

ನೀರು ಪೂರೈಕೆ ನಿರ್ಲಕ್ಷಿಸದಿರಿ

ರಾಘವೇಂದ್ರಗೌಡ ಭೀ ಪಾಟೀಲ್
ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಸೋಮವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಗ್ರಾಪಂ ಮಟ್ಟದಲ್ಲಿ ನೀರಿನ ಮೂಲಗಳ ಸಮಗ್ರ ಪರಿಶೀಲನೆ ನಡೆಸಬೇಕು ಎಂದರು. ಹಂಚಿನಾಳ, ಹೂಲಿಕಟ್ಟಿ, ಮನಿಕಟ್ಟಿ, ಶಿರಸಂಗಿ ವ್ಯಾಪ್ತಿಯ ಕಲ್ಲಾಪುರ, ಹೂಲಿ, ತೆಗ್ಗಿಹಾಳ ಗ್ರಾಮಗಳಲ್ಲಿ ನೀರಿನ ಕೊರತೆ ಕುರಿತು ಪಿಡಿಒಗಳು ಮಾಹಿತಿ ನೀಡಿದರು.
ತಾಪಂ ಇಒ ಆನಂದ ಬಡಕುಂದ್ರಿ ಮಾತನಾಡಿ, ಬೇಸಿಗೆ ಸಂದರ್ಭದಲ್ಲಿ ಜಲಮೂಲಗಳು ಬತ್ತುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಅಗತ್ಯ ಎಂದರು. ಅಂತರ್ಜಲಮಟ್ಟ ಕುಸಿತ, ಅತಿಯಾದ ಕೊಳವೆಬಾವಿ ಅವಲಂಬನೆ ಹಾಗೂ ನೀರಿನ ದುರ್ಬಳಕೆಯಿಂದ ನೀರಿನ ಅಭಾವ ಹೆಚ್ಚುತ್ತಿದೆ. ಇದರಿಂದ ರೋಗ-ರುಜಿನ ಹರಡುವ ಅಪಾಯ ಇರುವುದರಿಂದ ಗ್ರಾಪಂ ಮಟ್ಟದಲ್ಲಿ ಸಮರ್ಪಕ ಯೋಜನೆ ರೂಪಿಸಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ತೆರೆದ ಬಾವಿ, ಕೆರೆ ಹಾಗೂ ಟ್ಯಾಂಕ್‌ಗಳ ನೀರಿನ ಮಟ್ಟ ಪರಿಶೀಲನೆ ನಡೆಸಿ, ಹಾನಿಗೊಳಗಾದ ಪಂಪ್‌ಸೆಟ್ ಮತ್ತು ಪೈಪ್‌ಲೈನ್‌ಗಳ ಮಾಹಿತಿ ಸಂಗ್ರಹಿಸಬೇಕು. ಗ್ರಾಮಸಭೆ ಆಯೋಜಿಸಿ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಬೇಕು ಎಂದು ನಿರ್ದೇಶಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಪ್ರೀತಂ ರಾಠೋಡ, ಕೃಷಿ ಇಲಾಖೆ ಎಡಿ ಶಿವಪ್ರಕಾಶ ಪಾಟೀಲ, ಕೆಇಬಿ ಎಇಇ ಮಹೇಂದ್ರ ವಿಶಾಪುರಕರ, ಎಸ್.ಎ.ಕದ್ರಾಪುರ ಇತರರಿದ್ದರು.