ಕೊಕಟನೂರ ಗ್ರಾಮದ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಹಮ್ಮಿಕೊಂಡಿದ್ದ ಎಕ್ಸ್‌ರೇ ಉಚಿತ ಶಿಬಿರದಲ್ಲಿ ಡಾ.ಬಸನಗೌಡ ಕಾಗೆ, ಅಭಯಕುಮಾರ ಖೋತ, ರಾಜಕುಮಾರ ಅಡಹಳ್ಳಿ, ಸುರೇಶ ವಾಲಿಕಾರ ಇತರರಿದ್ದರು.
ಅಥಣಿ ಗ್ರಾಮೀಣ: ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡು ದಿನನಿತ್ಯ ದೇಹ ದಂಡಿಸುವ ಕಾರ್ಯ ಮಾಡುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಎಕ್ಸ್‌ರೇ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಜೀವನ ಶೈಲಿ ವಿಭಿನ್ನವಾಗಿದೆ. ಜಂಕ್‌ಫುಡ್ ರುಚಿಗೆ ಮಾರು ಹೋಗದೆ, ಸಾವಯುವ ಪದ್ಧತಿಯಿಂದ ಬೆಳೆದ ಆಹಾರ ಪದಾರ್ಥ ತಿನ್ನಬೇಕು ಎಂದರು.
ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಅಭಯಕುಮಾರ ಖೋತ ಮಾತನಾಡಿ, ಕಾರ್ಖಾನೆಯಲ್ಲಿ ಕಾರ್ಮಿಕರಿಗಾಗಿ ಎಲ್ಲ ರೀತಿಯ ಮುಂಜಾಗ್ರತೆ ಸಲಕರಣೆ ಕೊಡಲಾಗಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ ಜಾಗರೂಕತೆಯಿಂದ ಕೆಲಸ ಮಾಡಬೇಕು. ಕಾರ್ಮಿಕರ ಸಂರಕ್ಷಣೆ ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು. ವ್ಯವಸ್ಥಾಪಕ ರಾಜಕುಮಾರ ಅಡಹಳ್ಳಿ, ಸುರೇಶ ವಾಲಿಕಾರ, ರಾಜಸಿಂಹ ಪಾಟೀಲ, ಕಿಶೋರ ಸೂರ್ಯವಂಶಿ, ಉತ್ತಮ ದೇಸಾಯಿ, ಅನಿಲ ಖೋತಲೆ, ಮಹಾಬಲ ಯಲಿಗೌಡ, ರಮೇಶ ಹೊಸಟ್ಟಿ, ಆನಂದ ಕುಂಬಾರ, ಸುರೇಶ ಸಂಕ್ರಟ್ಟಿ, ಆನಂದ ಕಾಂಬಳೆ, ರಾಮಚಂದ್ರ ಅಸೋದೆ, ಸುಭಾಸ ಮಾಳಿ, ವಿನೋದ ಜಾಧವ, ರಾಜೇಂದ್ರ ಪಾಟೀಲ, ಖಂಡೆ ನಾಯಿಕ, ಎನ್.ಪಿ.ಹರ್ಷಾ, ಡಾ.ದೊಂಡಿಬಾ ಪವಾರ, ಜಗದೀಶ ಕುಲಕರ್ಣಿ, ಶ್ರೀಶೈಲ ಮಾಂಗ ಇತರರು ಇದ್ದರು.