ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗರಿಂದ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು. 
ಬೆಳಗಾವಿ

ರಾಜಕೀಯ ಷಡ್ಯಂತ್ರ ಮಾಡದಿರಿ

ಅಥಣಿ: ಪಟ್ಟಣದಲ್ಲಿ ಸೋಮವಾರ ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಪುತ್ರ ಚಿದಾನಂದ ಸವದಿ ವಿರುದ್ಧ ಬಿಡಿಸಿಸಿ ಯೂನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಮಾಡಿರುವ ಆರೋಪ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.
ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಅವರಿಗೆ ಮನವಿ ಸಲ್ಲಿಸಿ, ಶಾಸಕ ಲಕ್ಷ್ಮಣ ಸವದಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ರಾಜಕೀಯ ಷಡ್ಯಂತ್ರ ಹಿನ್ನೆಲೆಯಲ್ಲಿ ಸುಳ್ಳು ಹಲ್ಲೆ ಆರೋಪವನ್ನು ಸವದಿ ಕುಟುಂಬದ ವಿರುದ್ಧ ಮಾಡಲಾಗಿದೆ. ಇಂತಹ ಘಟನೆ ಅಥಣಿ ಕ್ಷೇತ್ರದ ಜನರು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯುವ ಮುಖಂಡ ಚಿದಾನಂದ ಸವದಿ, ಶೇಖರ ನೇಮಗೌಡ, ಡಿ.ಬಿ.ಠಕ್ಕಣವರ, ರಾಜು ನಾಡಗೌಡ, ಶಿವು ಗುಡ್ಡಾಪುರ, ಶಿವಕುಮಾರ ಸವದಿ, ಪರಪ್ಪ ಸವದಿ ಇತರರಿದ್ದರು.
ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗರಿಂದ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.