ಬೆಳಗಾವಿ ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ವಿಶ್ವ ಆರೋಗ್ಯ ದಿನ ಆಚರಿಸಲಾಯಿತು. ಡಾ.ಎಚ್.ಬಿ.ರಾಶೇಖರ, ನವೀನ ಎನ್., ಡಾ.ಆರ್.ಆರ್.ವಾಳ್ವೇಕರ, ಡಾ.ಶ್ರೀನಿವಾಸ ಬಿ. ಇತರರಿದ್ದರು. 
ಬೆಳಗಾವಿ

ದುಶ್ಚಟಗಳಿಗೆ ದಾಸರಾಗಬೇಡಿ

ರಾಘವೇಂದ್ರಗೌಡ ಭೀ ಪಾಟೀಲ್
ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಎಲ್‌ಇಯಂತಹ ಆರೋಗ್ಯ ಸಂಸ್ಥೆಗಳು ದುಶ್ಚಟಗಳಿಂದ ದೂರವಿರುವ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿವೆ ಎಂದರು.
ಆಸ್ಪತ್ರೆ ಆಡಳಿತಾಧಿಕಾರಿ ನವೀನ ಎನ್. ಮಾತನಾಡಿ, ನಿಯಮಿತ ಊಟ, ವ್ಯಾಯಾಮ, ಆಚಾರ, ವಿಚಾರ, ಧ್ಯಾನ ಮತ್ತು ಯೋಗ ರೂಢಿಸಿಕೊಂಡರೆ ಆರೊಗ್ಯಕರ ಜೀವನ ನಡೆಸಬಹುದು ಎಂದರು.
ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಮಾತನಾಡಿದರು. ತಜ್ಞ ವೈದ್ಯ ಡಾ.ಆರ್.ಆರ್.ವಾಳ್ವೇಕರ, ಡಾ.ಶ್ರೀನಿವಾಸ ಬಿ., ಪ್ರಾಶುಂಪಾಲ ಡಾ.ವಿಕ್ರಾಂತ ನೇಸರಿ, ಡಾ.ಸೌಮ್ಯಾ ಇತರರಿದ್ದರು. ಆರೋಗ್ಯ ದಿನಾಚರಣೆ ಅಂಗವಾಗಿ ಶಿವಾಜಿ ಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 100ಕ್ಕೂ ಅಧಿಕ ಜನರು ಆರೋಗ್ಯ ತಪಾಸಣೆ ಒಳಗಾದರು.