ತಲ್ಲೂರ ಗ್ರಾಮದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಜರುಗಿತು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷಯ ಕುರಿತು ಭಯ ಬೇಡ. ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ತಿಳಿಸಿದರು.
ಸಮಾಲೋಚನಾಧಿಕಾರಿ ಮಹಾಂತೇಶ ಹಿರೇಮಠ ಮಾತನಾಡಿ, ಬ್ಯಾಕ್ಟೀರಿಯಾದಿಂದ ಹರಡುವ ಕಾಯಿಲೆ ಇದಾಗಿದೆ. ರೋಗಿ ಕೆಮ್ಮುವಾಗ, ಸೀನುವಾಗ ಮತ್ತೊಬ್ಬರಿಗೆ ಹರಡುವ ಅಪಾಯವಿದೆ. ರೋಗ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಕ್ಷಯರೋಗ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.
ಶುಶ್ರೂಷಾಧಿಕಾರಿ ವೀರೇಶ ದೇಮಶೆಟ್ಟಿ, ಸಮುದಾಯ ಆರೋಗ್ಯ ಅಧಿಕಾರಿ ವಸಂತ ಚಹೌಣ, ಪ್ರಾಥಮಿಕ ಆರೋಗ್ಯ ಅಧಿಕಾರಿ ಸವಿತಾ ಚನ್ನಮೇತ್ರಿ, ಪ್ರಿಯಾಂಕಾ ಹೊಸಮನಿ, ಆರತಿ ಹೊಳ್ಳಿಕೇರಿ, ಮಹಾವೀರ ಜೊಡಟ್ಟಿ, ಭೀಮವ್ವ ಭಜಂತ್ರಿ, ತಿಪ್ಪವ್ವ ಇಟಗೌಡರ, ಮಲ್ಲವ್ವ ಕಟ್ಟಿಮನಿ, ಶಾಂತವ್ವ ಜಡಿಯರ ಇತರರಿದ್ದರು.