ಅಥಣಿಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮಲ್ಲೇಶ ಸವದಿ, ಸಂತೋಷ ಸಾವಡಕರ, ಶಶಿಕಾಂತ ಹುಲಕುಂದ, ರಾಮಗೌಡ ಗುಮತಾಜ ಇತರರು ಇದ್ದರು. 
ಬೆಳಗಾವಿ

ರಕ್ತದಾನ ಮಾಡಿ, ಜೀವ ಉಳಿಸಿ

ಪ್ರಶಾಂತ ಹೂಗಾರ

ಅಥಣಿ: ರೋಗಿಗಳ ಜೀವ ಉಳಿವಿಗಾಗಿ ರಕ್ತದಾನ ಮಾಡುವುದು ಅವಶ್ಯವಾಗಿದೆ ಎಂದು ಸಂಗಮನಾಥ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಮಲ್ಲೇಶ ಸವದಿ ಹೇಳಿದರು.

80ನೇ ಸ್ವಾತಂತ್ರೊೃೀತ್ಸವ ಅಂಗವಾಗಿ ಸಂಗಮನಾಥ ಸೋಶಿಯಲ್ ೌಂಡೇಷನ್, ಸಂಗಮನಾಥ ಬ್ಯಾಂಕ್, ಸಂಗಮನಾಥ ಗ್ಯಾಸ್ ಏಜೆನ್ಸಿ, ಯೂರೊಕಿಡ್ಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮುಕ್ತ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಥಣಿ ತಾಲೂಕಿನಲ್ಲಿ ರಕ್ತದ ಕೊರತೆ ಇದ್ದು, ರೋಗಿಗಳಿಗೆ ಸಕಾಲಕ್ಕೆ ರಕ್ತ ದೊರೆಯುತ್ತಿಲ್ಲ. ಜನರು ರಕ್ತದಾನ ಮಾಡಿದರೆ ಸಾಕಷ್ಟು ಜನರಿಗೆ ಉಪಯೋಗವಾಗಲಿದೆ ಎಂದರು.
ವಕೀಲ ಸಿದ್ಧಾರೂಢ ಸವದಿ ಮಾತನಾಡಿ, ಅಥಣಿಯ ಹಲವಾರು ಆಸ್ಪತ್ರೆಗಳಲ್ಲಿ ರೋಗಿಗಳು ರಕ್ತ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿವಿಧ ಕಾರ್ಯಕ್ರಮಗಳಿಗೆ ದುಂದುವೆಚ್ಚ ಮಾಡುವ ಬದಲು ರಕ್ತದಾನ ಶಿಬಿರ ಹಮ್ಮಿಕೊಳ್ಳಲು ಸಂಘ, ಸಂಸ್ಥೆಗಳು ಮುಂದಾಗಬೇಕು ಎಂದರು. ಪುರಸಭೆ ಸದಸ್ಯರಾದ ಸಂತೋಷ ಸಾವಡಕರ, ಶಶಿಕಾಂತ ಹುಲಕುಂದ, ರಾಮಗೌಡ ಗುಮತಾಜ, ಚೇತನ ಸವದಿ, ಸುರೇಶ ಠಕ್ಕಣವರ, ಪ್ರವೀಣ ಯಳಮೆಲಿ, ಶಿವಾನಂದ ಸವದಿ, ಶ್ರೀನಿವಾಸ ಅಂಬಲಜೇರಿ, ಅಥಣಿ ಬ್ಲಡ್ ಬ್ಯಾಂಕ್ ವ್ಯವಸ್ಥಾಪಕ ಮೆಹಬೂಬ್ ಮುಜಾವರ್ ಇತರರಿದ್ದರು.