ಕಾಕತಿಯಲ್ಲಿ ಹುಚ್ಚು ನಾಯಿ ಸೆರೆ ಹಿಡಿಯಲು ಸಜ್ಜಾಗಿದ್ದ ಗ್ರಾಪಂ ಸಿಬ್ಬಂದಿ. 
ಬೆಳಗಾವಿ

24 ಗಂಟೆಯಲ್ಲಿ 7 ಜನರಿಗೆ ಕಚ್ಚಿದ ಹುಚ್ಚುನಾಯಿ

ಬೆಳಗಾವಿ: ತಾಲೂಕಿನ ಕಾಕತಿ ಗ್ರಾಮದಲ್ಲಿ 24 ಗಂಟೆಯಲ್ಲಿ ಹುಚ್ಚುನಾಯಿಯೊಂದು ಏಳು ಜನರಿಗೆ ಕಚ್ಚಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಒಂದು ರಾತ್ರಿ ಹಾಗೂ ಒಂದು ಹಗಲಿನೊಳಗೆ ಶಾಸ್ತ್ರೀ ರಸ್ತೆ ಹಾಗೂ ಸುತ್ತಮುತ್ತಲಿನ ಬೀದಿಗಳಲ್ಲಿ ಓಡಾಡುತ್ತಿದ್ದ ಹುಚ್ಚುನಾಯಿ ಸ್ಥಳೀಯ ನಾಲ್ವರು, ಹಾಗೂ ಬೇರೆ ಕಡೆಯಿಂದ ಊರಿಗೆ ಬಂದಿದ್ದ ಮೂವರಿಗೆ ಕಚ್ಚಿದೆ. ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಹಾಗೂ ಗ್ರಾಪಂ ಸಿಬ್ಬಂದಿ ಜಂಟಿಯಾಗಿ ನಾಯಿಯನ್ನು ಸೆರೆಹಿಡಿದು ಗ್ರಾಮ ಹೊರವಲಯದ ಅವರಣ್ಯದಲ್ಲಿ ಬಿಟ್ಟು ಬಂದಿದ್ದಾರೆ. ಸದ್ಯ ನಾಯಿ ಅರಣ್ಯ ಸೇರಿದೆಯಾದರೂ ಗ್ರಾಮಸ್ಥರಲ್ಲಿನ ಭಯ ಮಾತ್ರ ದೂರವಾಗಿಲ್ಲ.