ಬೈಲಹೊಂಗಲ ನಗರದ ದೊಡ್ಡ ಕೆರೆಯ ವಾಯುವಿಹಾರದ ಮೈದಾನದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಡಾ.ಸಂಗಮೇಶ ಸವದತ್ತಿಮಠ, ಶಿವಪುತ್ರಪ್ಪ ಇಟ್ನಾಳ, ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ಭರಮನ್ನವರ ಇತರರಿದ್ದರು. 
ಬೆಳಗಾವಿ

ಮಾನಸಿಕ ಶಾಂತಿಗೆ ದಿವ್ಯ ಔಷಧ

ರಾಘವೇಂದ್ರಗೌಡ ಭೀ ಪಾಟೀಲ್
ಬೈಲಹೊಂಗಲ:
ದೊಡ್ಡ ಕೆರೆಯ ವಾಯುವಿಹಾರ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನ ಆರೋಗ್ಯ ಸ್ಥಿರವಾಗಿರಲು ಪ್ರತಿ ದಿನ ಯೋಗ ಮಾಡುವುದು ಅವಶ್ಯವಾಗಿದೆ. ಯೋಗದಿಂದ ಕೇವಲ ಶಾರೀರಿಕ ಸಂಪತ್ತು ದೊರೆಯದೆ ಮಾನಸಿಕ ಸಂಪತ್ತು ಲಭಿಸುತ್ತದೆ ಎಂದರು.
ಹಿರಿಯ ನಾಗರಿಕ ಶಿವಪುತ್ರಪ್ಪ ಇಟ್ನಾಳ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದಿನ ಯುವಕರು ದುಶ್ಚಟಗಳಿಗೆ ದಾಸರಾಗದೆ, ಯೋಗವನ್ನು ದಿನನಿತ್ಯದ ಜೀವನದಲ್ಲಿ ಬಳಸಿ ಉತ್ತಮ ಬದಕು ಸಾಗಿಸಬೇಕು ಎಂದರು.
ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ಭರಮನ್ನವರ, ಭುವನೇಶ್ವರಿ ಹಜೇರಿ, ಮಹಾನಂದಾ ತುಳಜನ್ನವರ, ಮಹೇಶ ವಾಲಿ, ಕಲಾವಿದ ರಾಜು ಬಡಿಗೇರ, ನಿರ್ಮಲಾ ಜಿಗಜಿನ್ನಿ ಇತರರಿದ್ದರು.