ಕೇರೂರ ಗ್ರಾಮದ ಅಪ್ಪಯ್ಯಗೌಡ ಪಾಟೀಲ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರ ಸಂಘದದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು. ವೀರೇಂದ್ರ ಪಾಟೀಲ, ಮಲ್ಲಪ್ಪ ಬಾಗಿ, ಬಿ.ಡಿ.ಪಾಟೀಲ ಇತರರಿದ್ದರು. 
ಬೆಳಗಾವಿ

ಸಹಾಯಧನದ ಚೆಕ್ ವಿತರಣೆ

ಪ್ರಶಾಂತ ಹೂಗಾರ
ಚಿಕ್ಕೋಡಿ: ತಾಲೂಕಿನ ಕೇರೂರ ಗ್ರಾಮದ ಹಾಲು ಉತ್ಪಾದಕರ ಸಂಘದ ಸಂಸ್ಥಾಪಕ ದಿ.ಜ್ಯೋತಿಗೌಡ ಪಾಟೀಲ (ಧನವಾಡೆ) ಅವರ ಪುಣ್ಯತಿಥಿ ಅಂಗವಾಗಿ ಅಪ್ಪಯ್ಯಗೌಡ ಪಾಟೀಲ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಮರಣ ಹೊಂದಿದ ಸದಸ್ಯರ ವಾರಸುದಾರರರಿಗೆ ಈಚೆಗೆ ಸಹಾಯಧನ ವಿತರಿಸಲಾಯಿತು.
ನಾಲ್ಕು ಕುಟುಂಬಗಳಿಗೆ ತಲಾ 50 ಸಾವಿರ ರೂ. ಹಾಗೂ ಹಾಲು ಉತ್ಪಾಕರ ಸಂಘದ ಸದಸ್ಯರ ರಾಸುಗಳ ಅಕಾಲಿಕ ಮರಣದ ವಿಮೆ ಹಣದ 60 ಸಾವಿರ ರೂ. ಚೆಕ್‌ನ್ನು ವಾರಸುದಾರಿಗೆ ಹಸ್ತಾಂತರಿಸಲಾಯಿತು.
ಮಲ್ಲಿಕಾರ್ಜುನ ಪಾಟೀಲ, ವೀರೇಂದ್ರ ಪಾಟೀಲ, ಮಲ್ಲಪ್ಪ ಬಾಗಿ, ಬಿ.ಡಿ.ಪಾಟೀಲ, ಮಾಯಗೌಡ ಪಾಟೀಲ, ಈಶ್ವರ ಶಿಂಧೆ, ಅಪ್ಪಯ್ಯ ಕಾಣಡೆ, ಮಹೇಶ ಪಾಟೀಲ, ಸುರೇಶ ಬಾಡಕರ, ರವಿ ಪಾಟೀಲ, ಶಿವಾನಂದ ಮಂಗನೂರೆ, ಅಪ್ಪಾಸಾಹೇಬ ಧನವಡೆ ಇತರರಿದ್ದರು.