ಬೆಳಗಾವಿ ವಾರ್ತಾ ಇಲಾಖೆಯಲ್ಲಿ ಗುರುವಾರ ಉಪನಿರ್ದೇಶಕ ಗುರುನಾಥ ಕಡಬೂರ ಗ್ರಾಮೀಣ ಪತ್ರಕರ್ತರ ಬಸ್ ಪಾಸ್‌ಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ಬೆಳಗಾವಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಾರಿಗೆ ತಂದಿರುವ ಯೋಜನೆಯಡಿ ಜಿಲ್ಲೆಯ ಕೆಲ ತಾಲ್ಲೂಕುಗಳ ಪತ್ರಕರ್ತರಿಗೆ ಗುರುವಾರ ಉಚಿತ ಬಸ್ ಪಾಸ್ ವಿತರಿಸಲಾಯಿತು.
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಭವನದಲ್ಲಿ ಗುರುವಾರ ಜರುಗಿದ ಸಮಾರಂಭದಲ್ಲಿ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಸಾಂಕೇತಿಕವಾಗಿ ಕೆಲ ಪತ್ರಕರ್ತರಿಗೆ ಪಾಸ್ ವಿತರಿಸಿ ಮಾತನಾಡಿ, ತಾಲೂಕು ಮಟ್ಟದ ಅರ್ಹ ಪತ್ರಕರ್ತರು ಅಗತ್ಯ ದಾಖಲೆಗಳೊಂದಿಗೆ ಸರ್ಕಾರದ ಸೇವಾಸಿಂಧು ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ವಾರ್ತಾ ಸಹಾಯಕ ವಿಜಯಕುಮಾರ ಬೆಟಗೇರಿ, ಎಂ.ಎಲ್.ಜಮಾದಾರ, ಪ್ರದೀಪಕುಮಾರ ಮೇಲಿನಮನಿ, ಉಳವಯ್ಯ ಹಿರೇಮಠ ಇತರರಿದ್ದರು.