ಸಂಕೇಶ್ವರ ಸಮೀಪದ ನಿಡಸೋಸಿಯ ಎಸ್‌ಜೆಪಿಎನ್ ಟ್ರಸ್ಟ್ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಬಸವರಾಜ ಹಾಲಬಾವಿ, ಉಮೇಶ ನಾಯಕ, ಜಿ.ಬಿ.ಸಂಗೋಟಿ ಇದ್ದರು.
- ಜಗದ್ಗುರು ಡಾ.ಶಿವಲಿಂಗೇಶ್ವರ ಸ್ವಾಮೀಜಿ ಅಭಿನುಡಿ
- ವಿದ್ಯಾರ್ಥಿಗಳ ಪದವಿ ಪ್ರದಾನ
ಸಂಕೇಶ್ವರ: ಸಮಾಜದಲ್ಲಿ ಉತ್ತಮ ಸ್ಥಾನ ತಲುಪಲು ಶಿಕ್ಷಣ ಅರ್ಹತೆ ನೀಡಬಲ್ಲದು. ಆದರೆ, ಶಿಸ್ತು, ಪ್ರಾಮಾಣಿಕ ಪ್ರಯತ್ನ ಸಾಧನೆ ಮಾಡಲು ಸಹಕಾರಿ ಆಗುತ್ತವೆ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ನಿಡಸೋಸಿಯ ಎಸ್‌ಜೆಪಿಎನ್ ಟ್ರಸ್ಟ್ನ ವಿಜ್ಞಾನ, ವಾಣಿಜ್ಯ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್ಸ್ ಪದವಿ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಂದು ಪದವಿಯೂ ತನ್ನದೇ ಪ್ರಾಮುಖ್ಯ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ರೂಪದಲ್ಲಿ ತೊಡಗಿಸಿಕೊಂಡು ಕೊಡುಗೆ ನೀಡುವ ಮೂಲಕ ಗ್ರಾಮೀಣರ ಬದುಕಿನಲ್ಲಿ ಬದಲಾವಣೆ ತರಬೇಕಿದೆ ಎಂದರು.
ಜಿ.ಬಿ.ಸಂಗೋಟಿ ಮಾತನಾಡಿ, ಪೈಪೋಟಿ ಯುಗದಲ್ಲಿ ತಾಂತ್ರಿಕ ಜ್ಞಾನದ ಜತೆಗೆ ಮಾನವೀಯ ಮೌಲ್ಯ ಅಗತ್ಯವಾಗಿವೆ. ವಿದ್ಯಾರ್ಥಿಗಳು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ಶಿಕ್ಷಣಕ್ಕೆ ಅರ್ಥ ದೊರೆಯುತ್ತದೆ ಎಂದು ಹೇಳಿದರು. ಪ್ರಾಚಾರ್ಯ ಉಮೇಶ ನಾಯಿಕ ಮಾತನಾಡಿದರು.
ಬಿಸಿಎ ೧೬೮, ಬಿಕಾಂ ೬೭, ಬಿಎಸ್ಸಿ ೨೫ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇತ್ತೀಚೆಗೆ ಕ್ಯಾಂಪಸ್ ಸಂದರ್ಶನದ ಮೂಲಕ ವಿವಿಧ ಉದ್ಯೋಗಗಳಿಗೆ ಆಯ್ಕೆಯಾದ ೨೧೩ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉಮೇಶ ನಾಯಕ, ಜಿ.ಬಿ.ಸಂಗೋಟಿ ಇತರರು ಇದ್ದರು. ಪ್ರಾಚಾರ್ಯ ಬಸವರಾಜ ಹಾಲಬಾವಿ ಸ್ವಾಗತಿಸಿದರು. ಪ್ರೀತಿ ಚಿಲಮಿ ಹಾಗೂ ವೀಣಾ ಹುಗ್ಗಿ ನಿರೂಪಿಸಿದರು. ಪ್ರೊ.ಮಹಾಂತೇಶ ಪಾಟೀಲ ವಂದಿಸಿದರು.
"
ತಂದೆ-ತಾಯಿ, ಕಲಿಸಿದ ಗುರು ಹಾಗೂ ಶಾಲೆ ಪ್ರತಿಯೊಬ್ಬ ವಿದ್ಯಾರ್ಥಿ ಬದುಕು ರೂಪಿಸಿದ ನೆನಪನ್ನು ಜೀವನದ ಪ್ರತಿ ಹಂತದಲ್ಲಿಯೂ ಮರೆಯಾಗಬಾರದು.
— ಡಾ.ಶಿವಲಿಂಗೇಶ್ವರ ಸ್ವಾಮೀಜಿ ನಿಡಸೋಸಿ