ಜೆಎನ್ಎಂಸಿ ಕ್ಯಾಂಪಸ್ನಲ್ಲಿರುವ ಕೆಎಲ್ಇ ಶತಮಾನೋತ್ಸವ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ. ಎಂ.ದಯಾನಂದ, ಡಾ.ಉಮಾ ನಂಬಿಯಾರ್, ಪೊ. ಸಂದೀಪ ಶ್ರೀವಾಸ್ತವ, ಡಾ.ವಿ.ಎಂ.ಪಟ್ಟಣಶೆಟ್ಟಿ ಇತರರಿದ್ದರು.
ಬೆಳಗಾವಿ: ಆರೋಗ್ಯ ರಣೆ, ಕಾರ್ಯಪಡೆ ಅಭಿವೃದ್ಧಿ, ಆರೋಗ್ಯ ತಂತ್ರಾನ, ರೋಗಿಗಳ ಡೇಟಾ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ಡಿಜಿಟಲ್ ರೂಪಾಂತರ ವಿಕಸನಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕೆಎಲ್ಇ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕಿಯ ಸಂಶೋಧನಾ ಕೇಂದ್ರದ ವೈದ್ಯಕಿಯ ನಿರ್ದೇಶಕ ಕರ್ನಲ್ ಡಾ.ಎಂ. ದಯಾನಂದ ಹೇಳಿದರು.
ಇಲ್ಲಿನ ಜೆಎನ್ಎಂಸಿ ಕ್ಯಾಂಪಸ್ನಲ್ಲಿರುವ ಕೆಎಲ್ಇ ಶತಮಾನೋತ್ಸವ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಡಿಜಿಟಲ್ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐಐಎಎಸ್ಸಿ ವೈದ್ಯಕಿಯ ಶಾಲೆಯ ಪ್ರತಿಷ್ಠಾನದ ಸಿಇಒ ಡಾ.ಉಮಾ ನಂಬಿಯಾರ್, ಉಪಕುಲಪತಿ ಪೊ.ಸಂದೀಪ ಶ್ರೀವಾಸ್ತವ, ಕಾಹೆರ ರಿಜಿಸ್ಟ್ರಾರ್ ಡಾ.ವಿ.ಎಂ.ಪಟ್ಟಣಶೆಟ್ಟಿ, ಪ್ರಾಂಶುಪಾಲ ಡಾ.ರಾಜೇಶ ಪವಾರ, ಡಾ.ದೀಪಾ ನಾಯರ, ಡಾ.ಉರ್ಮಿಳಾ ಕಾಗಲ, ಡಾ.ಸಂತೋಷ ಪಾಟೀಲ ಇತರರಿದ್ದರು.