ಕಿಟದಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೈನುಗಾರಿಕೆ ತರಬೇತಿಯನ್ನು ಎಚ್.ಆರ್.ಲವಕುಮಾರ ಉದ್ಘಾಟಿಸಿದರು. ಡಾ.ಬಾಹುಬಲಿ ಸಗರೆ, ಗೋವಿಂದನಾಯ್ಕ ನಾಯ್ಕರ, ಪಡೆಪ್ಪ ಬಂಡ್ರೋಳಿ, ರುದ್ರಯ್ಯ ಹಿರೇಮಠ ಇತರರಿದ್ದರು. 
ಬೆಳಗಾವಿ

ಧರ್ಮಸ್ಥಳ ಸಂಸ್ಥೆ ಕಾರ್ಯ ಮಾದರಿ

ಅರ್ಚನಾ ಜಾಧವ
ಬೆನಕಟ್ಟಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಸಮಾಜಮುಖಿ ಕಾರ್ಯಕ್ರಮ ಹಾಗೂ ಜನಪರ ಯೋಜನೆಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿವೆ ಎಂದು ಜಿಲ್ಲಾ ನಿರ್ದೇಶಕ
ಎಚ್.ಆರ್.ಲವಕುಮಾರ ಹೇಳಿದರು.
ಕಿಟದಾಳ ಗ್ರಾಮದಲ್ಲಿ ಬೆನಕಟ್ಟಿ ವಲಯದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿ ಈಚೆಗೆ ಹಮ್ಮಿಕೊಂಡಿದ್ದ ಹೈನುಗಾರಿಕೆ ತರಬೇತಿಯಲ್ಲಿ ಮಾತನಾಡಿ, ಕಷಿಯಲ್ಲಿ ಹೈನುಗಾರಿಕೆ ಮಹತ್ವ ಮತ್ತು ರೈತರ ಆಸಕ್ತಿ ಕುರಿತಾಗಿ ಮಾಹಿತಿ ನೀಡಿದರು.
ಪಶು ವೈದ್ಯಾಧಿಕಾರಿ ಬಾಹುಬಲಿ ಸಗರೆ ಮಾತನಾಡಿ, ಲಾಭದಾಯಕ ಹೈನುಗಾರಿಕೆ ವಿಧಾನ, ರಾಸುಗಳ ಆಯ್ಕೆ ಹಾಗೂ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿಸಿದರು.
ಹೈನುಗಾರಿಕೆ ಲಾನುಭವಿಗಳಿಗೆ ಪಶು ಇಲಾಖೆ ವತಿಯಿಂದ ಮಿನರಲ್ ಮಿಕ್ಸರ್ ಮತ್ತು ವಿಟಮಿನ್ ಮಾತ್ರೆ ಉಚಿತವಾಗಿ ವಿತರಿಸಲಾಯಿತು.
ಗೋವಿಂದನಾಯ್ಕ ನಾಯ್ಕರ, ಪಡೆಪ್ಪ ಬಂಡ್ರೋಳಿ, ರುದ್ರಯ್ಯ ಹಿರೇಮಠ, ಒಕ್ಕೂಟದ ಅಧ್ಯಕ್ಷೆ ಗೀತಾ, ವಲಯ ಮೇಲ್ವಿಚಾರಕ ಲಕ್ಕಪ್ಪ, ಕೃಷಿ ಮೇಲ್ವಿಚಾರಕ ಅಣ್ಣಪ್ಪ ಎಸ್., ಸೇವಾ ಪ್ರತಿನಿಧಿ ದೀಪಾ ಹಾಗೂ ಪ್ರಗತಿಪರ ರೈತರು ಇದ್ದರು.