ಜುಗೂಳ ಗ್ರಾಮ ಪಂಚಾಯಿತಿ ಪಿಡಿಒ ಶಿಲ್ಪಾ ನಾಯಿಕವಾಡಿ ಅವರನ್ನು ಜಿಪಂ ಸಿಇಒ ರಾಹುಲ್ ಶಿಂಧೆ ಸನ್ಮಾನಿಸಿದರು. ವೀರಣ್ಣ ವಾಲಿ ಇದ್ದರು. 
ಬೆಳಗಾವಿ

ಸಕಾಲದಲ್ಲಿ ಕರ ಸಂದಾಯದಿಂದ ವಿಕಾಸ

ಪ್ರಶಾಂತ ಹೂಗಾರ
ಕಾಗವಾಡ: ಸಕಾಲದಲ್ಲಿ ಕರ ಸಂದಾಯ ಮಾಡಿ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಿದ ಸಾರ್ವಜನಿಕರ ಕಾರ್ಯ ಶ್ಲಾಘನೀಯ ಎಂದು ಜಿಪಂ ಸಿಇಒ ರಾಹುಲ ಶಿಂಧೆ ಹೇಳಿದರು.
ತಾಲೂಕಿನ ಉಗಾರ ಬಿಕೆ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಕಾಯಕ ಗ್ರಾಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಶೇ.100ರಷ್ಟು ಕರ ಸಂಗ್ರಹ ಮಾಡಿರುವ ತಾಲೂಕಿನ 7 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುಭಾಸ ಹುಬ್ಬಳ್ಳಿ, ಪರಶುರಾಮ ಬತಗುಣಕಿ, ನಾಗರಾಜ ಕಾಂಬಳೆ, ರವೀಂದ್ರ ದಶವಂತ, ಸಂಜೀವ ಸೂರ್ಯವಂಶಿ, ಶಿಲ್ಪಾ ನಾಯಿಕವಾಡಿ, ಶಿವಾನಂದ ತೊಳನೂರ, ರಾಕೇಶ ಕಾಂಬಳೆ ಅವರನ್ನು ಸನ್ಮಾನಿಸಿದರು. ಬಳಿಕ ಸರ್ಕಾರಿ ಕನ್ನಡ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಎರಡೂ ಶಾಲೆಗಳು ಒಂದೇ ಆವರಣದಲ್ಲಿ ಇರುವುದರಿಂದ ವಿಲೀನಗೊಳಿಸಿ ಶಿಕ್ಷಣ ನೀಡಿದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ ಸುಧಾರಣಾ ಸಮಿತಿ, ಪಾಲಕರು ಮತ್ತು ಶಾಸಕರ ಅಭಿಪ್ರಾಯ ಪಡೆದು ವಿಲೀನಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.
ತಾಪಂ ಇಒ ವೀರಣ್ಣ ವಾಲಿ ಮಾತನಾಡಿ, ಹಿಂದುಳಿದ ಗ್ರಾಮ ಪಂಚಾಯಿತಿಗಳಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಗ್ರಂಥಾಲಯ, ಕೌಶಲ ಅಭಿವೃದ್ಧಿ ಕುರಿತು ಮಾತನಾಡಿದರು.
ಜಿಪಂ ಯೋಜನಾಧಿಕಾರಿ ರವೀಂದ್ರ ಬಂಗಾರೆಪ್ಪನವರ, ಅಥಣಿ ತಾಪಂ ಇಒ ಶಿವಾನಂದ ಕಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಬಾವಿ, ಬಿಸಿಯೂಟದ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ, ಅಭಿಯಂತ ರವೀಂದ್ರ ಮುರಗಾಲಿ, ಸಹಾಯಕ ನಿರ್ದೇಶಕರಾದ ಎ.ಡಿ.ಅನ್ಸಾರಿ, ಶಿವಾನಂದ ಸನ್ನಾಳ, ಡಾ.ಬಸಗೌಡ ಕಾಗೆ, ಡಾ.ಜ್ಞಾನೇಶ್ವರ ಕಾಂಬಳೆ, ವೆಂಕಟೇಶ ಕುಲಕರ್ಣಿ, ಕೃಷಿ ಅಧಿಕಾರಿಗಳಾದ ನಿಂಗನಗೌಡ ಬಿರಾದಾರ, ಕಾಂತಿನಾಥ ಬಿರಾದಾರ ಇತರರಿದ್ದರು.