ಶ್ರೀ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜು ಹಾಗೂ ಮಾತೋಶ್ರೀ ನೀಲಮ್ಮಾ ಪ್ರಥಮ ದರ್ಜೆ ಮಹಾವಿದ್ಯಾಲಯಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಶಿವಶಂಕರ ಎನ್. ಮತ್ತು ಅಭಿನವ ಗುರುಲಿಂಗಜಂಗಮ ಸ್ವಾಮೀಜಿ ಉದ್ಘಾಟಿಸಿದರು. ಜಿ.ಆರ್.ಬಸರಗಿ, ಮಹಾಂತೇಶ ಕುಳ್ಳೊಳಿ ಇತರರಿದ್ದರು. 
ಬೆಳಗಾವಿ

ಶಿಕ್ಷಣದಿಂದ ಸಮಾಜದ ಅಭಿವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ಮ್ಯಾನೇಜರ್ ಶಿವಶಂಕರ ಎನ್. ಅಭಿಮತ
  • ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ

ಕಕಮರಿ: ವಿದ್ಯಾರ್ಥಿಗಳು ಓದಿನ ಜತೆಗೆ ಸಂಸ್ಕಾರ ಬೆಳೆಸಿಕೊಂಡು ಮುನ್ನಡೆದರೆ ಸಾಧನೆ ಸಾಧ್ಯ ಎಂದು ಕೋಹಳ್ಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ಶಿವಶಂಕರ ಎನ್. ಹೇಳಿದರು.

ಶ್ರೀ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜು ಹಾಗೂ ಮಾತೋಶ್ರೀ ನೀಲಮ್ಮಾ ಪ್ರಥಮದರ್ಜೆ ಮಹಾವಿದ್ಯಾಲಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಸಾಂಸ್ಕೃತಿಕ ಮತ್ತು ಕ್ರೀಡಾ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣದಿಂದಲೇ ಸಮಾಜದ ಅಭಿವೃದ್ಧಿ ಎಂದು ಶಿಕ್ಷಣದ ಜ್ಯೋತಿ ಬೆಳಗಿಸಿದ ಅಭಿನವ ಗುರುಲಿಂಗಜAಗಮ ಸ್ವಾಮೀಜಿ ಕಾರ್ಯ ಶ್ಲಾಘನೀಯ ಎಂದರು.
ಪ್ರಾಚಾರ್ಯ ಸಂಗಮೇಶ ಬಸರಗಿ ಮಾತನಾಡಿ, ಗ್ರಾಮೀಣ ಹಾಗೂ ಗಡಿಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ನಗರಗಳನ್ನು ಅವಲಂಬಿಸಬೇಕಾದ ಅನಿವಾರ್ಯ ಅರಿತ ಅಭಿನವ ಗುರುಲಿಂಗಜಂಗಮ ಸ್ವಾಮೀಜಿ ಸ್ಥಳೀಯ ಮಟ್ಟದಲ್ಲೇ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಎಲ್‌ಕೆಜಿಯಿಂದ ಪದವಿ ಕಾಲೇಜಿನವರೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದರು.
ಪೀಠಾಧ್ಯಕ್ಷ ಸದ್ಗುರು ಅಭಿನವ ಗುರುಲಿಂಗಜಂಗಮ ಸ್ವಾಮೀಜಿ, ಕಾರ್ಯಧ್ಯಕ್ಷ ಜಿ.ಆರ್.ಬಸರಗಿ, ಮಹಾಂತೇಶ ಕುಳ್ಳೊಳಿ, ಪ್ರಾಚಾರ್ಯ ಶಿವಗುರು ಬಸರಗಿ, ಉಪನ್ಯಾಸಕರಾದ ಕೆ.ಡಿ.ಪಾಟೀಲ, ಬಿ.ಆರ್.ಪಾಟೀಲ, ಜಿ.ಆರ್.ಮಡ್ಡೆಪ್ಪಗೋಳ, ಬಿ.ಎಲ್.ಪೂಜಾರಿ,

ಡಿ.ಎಚ್.ಕಾರಜೋಳ, ವಿ.ಎಚ್.ಚನ್ನಾಳ, ಕೆ.ಬಿ.ನಾವಿ,

ಎಸ್.ಎಸ್.ತೆಲಸಂಗ ಇತರರಿದ್ದರು.